ಜನ್ನತ್ ಮೊಹಲ್ಲಾ

Author : ಅಬ್ಬಾಸ್ ಮೇಲಿನಮನಿ

Pages 216

₹ 100.00
Published by: ಲಕ್ಷ್ಮ್ಯ ಪ್ರಕಾಶನ
Address: ಬೆಂಗಳೂರು

Synopsys

‘ಜನ್ನತ್ ಮೊಹಲ್ಲಾ’ ಕೃತಿಯು ಅಬ್ಬಾಸ್ ಮೇಲಿನಮನಿ ಅವರ ಕಾದಂಬರಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಜಿ.ಪಿ ಬಸವರಾಜು `ಅಬ್ಬಾಸರ ಈ ಕಾದಂಬರಿಯಲ್ಲಿ ಹೆಜ್ಜೆಹೆಜ್ಜೆಗೆ ಹಿಂಸೆಯ ಬೀಜಗಳಿವೆ. ಒಂದಿಷ್ಟು ಅವಕಾಶ ಸಿಕ್ಕರೂ ಸಾಕು, ಈ ಬೀಜಗಳು ಮೊಳಕೆಯೊಡೆದು ಎಲ್ಲೆಲ್ಲೂ ಹಿಂಸೆಯ ರುದ್ರನರ್ತನ ಈ ಕಾದಂಬರಿಯ ತುಂಬ ರಂಗುರಂಗಾಗಿ ಕಾಣಿಸಿಬಿಡಬಹುದು. ಆದರೆ, ಕಾದಂಬರಿ ಉದ್ದಕ್ಕೂ ಹಿಂಸೆಯನ್ನು ಗೆಲ್ಲಲು ನೋಡುತ್ತದೆ. ಅಬ್ಬಾಸ್ ಅವರ ನಂಬಿಕೆ ಅಹಿಂಸೆಯಲ್ಲಿ, ಪ್ರೀತಿಯಲ್ಲಿ, ಮಾನವತೆಯಲ್ಲಿ, ವ್ಯಕ್ತಿ ಘನತೆಯಲ್ಲಿ, ಮೊಹಲ್ಲಾದ, ಊರಿನ, ದೇಶದ ಹಿತದಲ್ಲಿ‘ ಎಂದಿದ್ದಾರೆ. ಅಬ್ಬಾಸ ಉತ್ತಮ ಕತೆಗಳನ್ನು ಓದಿದವರು ಈ `ಜನ್ನತ್ ಮೊಹಲ್ಲಾ‘ ಪ್ರವೇಶಿಸಲೇಬೇಕು. ಕತೆ ಹೇಳುವ ಶೈಲಿ, ಪಾತ್ರವನ್ನು ಕೆತ್ತುವ, ಅದೆಲ್ಲವುದಕ್ಕಿಂತ ಹೆಚ್ಚಾಗಿ ಅತ್ಯಂತ ಸಹಜವಾಗಿ ನಿರೂಪಣೆ ಮಾಡುವ ಅಬ್ಬಾಸರನ್ನು ಓದುವುದೇ ಒಂದು ಖುಷಿ. ಇಲ್ಲಿ ಉರ್ದು ಭಾಷೆ ವಿಶಿಷ್ಟವಾಗಿ ಬಳಕೆಯಾಗಿದೆ. ಅದು ಕಾದಂಬರಿಗೆ ಪ್ಲಸ್ ಪಾಯಿಂಟ್ ಆಗಿ ಸಂತಸ ತರುತ್ತದೆ. ಕನ್ನಡದ ಅಪರೂಪದ ಕಾದಂಬರಿಗಳ ಸಾಲಿಗೆ ಅಬ್ಬಾಸರ ಪ್ರಥಮ ಕಾದಂಬರಿಯೂ ಸೇರುತ್ತದೆ’ ಎಂದು ಈ ಕೃತಿಯಲ್ಲಿ ವಿಶ್ಲೇಷಿತವಾಗಿದೆ.

About the Author

ಅಬ್ಬಾಸ್ ಮೇಲಿನಮನಿ
(05 March 1954 - 21 September 2020)

ಕನ್ನಡದ ಜನಪ್ರಿಯ ಕಥೆಗಾರರಾದ ಅಬ್ಬಾಸ್ ಮೇಲಿನಮನಿ ಹುಟ್ಟೂರು ಬಾಗಲಕೋಟೆ. 1954 ಮಾರ್ಚ್ 05ರಂದು ಜನಸಿದ ಇವರು ಪದವಿ ಶಿಕ್ಷಣದವರೆಗಿನ ಬಾಗಲಕೋಟೆಯ ನಾನಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಇವರು ಬರೆದಿರುವ ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಥಾ ಸಂಕಲನಗಳು: ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕಾದಂಬರಿಗಳು: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ, ಸಂಪಾದಿತ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು. ಇವರಿಗೆ ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ...

READ MORE

Related Books