ಮಾಯಾ ಕಿನ್ನರಿ

Author : ಬೈರಮಂಗಲ ರಾಮೇಗೌಡ

Pages 136

₹ 150.00




Year of Publication: 2021
Published by: ಬೈರಮಂಗಲ ರಾಮೇಗೌಡ ಪ್ರತಿಷ್ಠಾನ
Address: #84, ಚಿತ್ತಾರ, 4 ನೇ ಕ್ರಾಸ್, ಪುಷ್ಪಗಿರಿನಗರ, ಹೊಸಕೆರೆಹಳ್ಳಿ ಪೋಸ್ಟ್. ಬನಶಂಕರಿ 3 ನೇ ಮುಖ್ಯ ರಸ್ತೆ, ಬೆಂಗಳೂರು-560085
Phone: 8050988014

Synopsys

’ಮಾಯಾ ಕಿನ್ನರಿ’ ಬೈರಮಂಗಲ ರಾಮೇಗೌಡ ಅವರ ಕಾದಂಬರಿ. ಅಂತರಂಗ ಹಾಗೂ ಬಹಿರಂಗ ಶುದ್ದಿಯನ್ನು ಪ್ರಕಟಿಸಿದ ಸ್ವಾಮಿಯೊಬ್ಬರ ಏಳುಬೀಳಿನ ಕಥನ ’ಮಾಯಾ ಕಿನ್ನರಿ’. ಲೇಖಕ ಕಂಡು, ಕೇಳಿದ ಘಟನೆಗಳೆಲ್ಲವನ್ನು ಕಥೆಯ ವ್ಯಾಪ್ತಿಯಂತೆ ಹಿಗ್ಗಿಸುತ್ತಾ, ಒಂದರೊಳಗೊಂದು ತಳುಕು ಹಾಕಿಕೊಳ್ಳುತ್ತ, ನಿಯಂತ್ರಣವನ್ನು ಮೀರಿ ಬೆಳೆದು ಅದಕ್ಕೊಂದು ಕಾದಂಬರಿಯ ಸ್ವರೂಪ ನೀಡಿದ್ದಾರೆ. ಲೇಖಕ ಪ್ರಸ್ತಾಪಿಸಲು ಹೊರಟಿರುವುದು ಒಬ್ಬ ಯುವಕ ಮಠ ಸೇರಿ ಸನ್ಯಾಸಿಯಾಗುವಾಗಿನ ಮನಸ್ಥಿತಿ, ಸನ್ಯಾಸಿ ಸ್ವಾಮೀಜಿಯಾಗುವಾಗಿನ ಮನಸ್ಥಿತಿ ಮತ್ತು ಮಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅದರಿಂದ ಸುಲಭವಾಗಿ ಸಿಗಬಹುದಾದ ಸುಖಭೋಗಗಳಲ್ಲಿ ಮುಳುಗುವ ಅಥವಾ ಸಮಾಜಕ್ಕೆ ತೆರೆದುಕೊಳ್ಳುವ ಮನಸ್ಥಿತಿಯನ್ನು. ಇಲ್ಲಿ ವಸ್ತುವಾಗಿಸಿಕೊಂಡಿದ್ದಾರೆ. 'ಮಾಯೆ' ಗೆ ಹಲವು ಮುಖಗಳಿವೆ. ಅಂತೆಯೇ 'ಕಿನ್ನರಿ' ಎನ್ನುವುದಕ್ಕೆ ಎರಡು ಅರ್ಥಗಳಿವೆ. ದೇವತೆಗಳ ಉಪವರ್ಗದಲ್ಲಿ ಬರುವ, ಮೋಹಕವಾದ ರೂಪ ಸೌಂದರ್ಯ ಹಾವ ಭಾವ ವಿಲಾಸ ವಿಭ್ರಮಗಳನ್ನು ಹೊಂದಿರುವ ಕಿನ್ನರ ಸ್ತ್ರೀ ಎನ್ನುವುದು ಒಂದು ಅರ್ಥವಾದರೆ, ಮಧುರ ನಾದದಿಂದ ಸಮ್ಮೋಹನಗಳಿಸಿಬಿಡುವ ತಂತೀವಾದ್ಯದ ಹೆಸರು 'ಕಿನ್ನರಿ' ಎನ್ನುವುದು ಇನ್ನೊಂದು ಅರ್ಥವಾಗಿದೆ. ಈ ಎರಡರ ಪರಿಣಾಮವೂ ಮರುಳುಗೊಳಿಸುವುದೇ ಆಗಿದೆ. 'ಮಾಯೆ' ಮತ್ತು 'ಕಿನ್ನರಿ' ಪ್ರತ್ಯೇಕವಾಗಿಯೇ ಅತ್ಯಂತ ಪ್ರಭಾವಶಾಲಿಗಳು. ಇನ್ನು ಎರಡೂ ಒಟ್ಟುಗೂಡಿದರೆ ಉಂಟಾಗಬಹುದಾದ ಪರಿಣಾಮ ಊಹೆಗೆ ನಿಲುಕದ್ದು ಎನ್ನುತ್ತಾರೆ. ಅಂಥ ಮಾಯೆಯನ್ನು ಹಿಡಿದು ಆಡಿಸಬಲ್ಲ ಸಮರ್ಥರಿಂದ ಆ ಮುಖಗಳೂ ಜನರೆದುರು ಪ್ರಕಟವಾಗಬೇಕೆನ್ನುತ್ತಾರೆ ಲೇಖಕರು.

About the Author

ಬೈರಮಂಗಲ ರಾಮೇಗೌಡ

ಜನ್ಮಸ್ಥಳ ರಾಮನಗರ ಜಿಲ್ಲೆಯ ಬೈರಮಂಗಲ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಿAದ ಕನ್ನಡ ಎಂ.ಎ. ,ಮೈಸೂರು ವಿಶ್ವವಿದ್ಯಾನಿಲಯದಿಂದ `ಕುವೆಂಪು ಕಾವ್ಯ' ಕುರಿತ ಸಂಶೋಧನೆಗೆ ಪಿಎಚ್.ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರಗಳಲ್ಲಿ 35 ವರ್ಷಗಳ ಬೋಧನಾನುಭವ.  ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಅಂಕಣ ಬರಹ, ಮಕ್ಕಳ ಸಾಹಿತ್ಯ, ಸಂಪಾದನೆ, ಅಭಿನಂದನೆ ಪ್ರಕಾರಗಳಲ್ಲಿ 40ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ. ಸಿವಿಜಿ ಪಬ್ಲಿಕೇಷನ್ಸ್ನಿಂದ `ಕುವೆಂಪು 108 ನೇ ಜನ್ಮ ದಿನಕ್ಕೆ 108 ಕೃತಿಗಳು' ಮಾಲಿಕೆ ಮತ್ತು `ಕುವೆಂಪು ಸಾಹಿತ್ಯ' ಮಾಲಿಕೆಯ 25 ಕೃತಿಗಳ ಸಂಪಾದಕ.  ಕೆಲವು ಪ್ರಕಟಿತ ಕೃತಿಗಳು ...

READ MORE

Related Books