ಪುರುಷೋತ್ತಮಾಯಣ-2

Author : ಪುರುಷೋತ್ತಮ ದಾಸ್ ಹೆಗ್ಗಡೆ

Pages 520

₹ 1000.00
Year of Publication: 2023
Published by: ವಂಶಿ ಪಬ್ಲಿಕೇಷನ್ಸ್
Address: #4, ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ ಬಸ್ ಸ್ಟಾಪ್ ಹತ್ತಿರ, ಬಿ.ಎಚ್ ರೋಡ್, ಸುಭಾಸ್ ನಗರ, ನೆಲಮಂಗಲ ಬೆಂಗಳೂರು-562123
Phone: 9916595916

Synopsys

‘ಪುರುಷೋತ್ತಮಾಯಣ-2’ಪುರುಷೋತ್ತಮ ದಾಸ್‌ ಹೆಗ್ಗಡೆ ಅವರ ಕಾದಂಬರಿಯಾಗಿದೆ. ಭರತವರ್ಷದ ನಾಗರಿಕ ಮೂಲನಿವಾಸಿಗಳು ವಿಜ್ಞಾನ-ತಂತ್ರಜ್ಞಾನದಲ್ಲಿ ಮುಂದುವರೆದಿದ್ದು ವಿಮಾನದಲ್ಲಿ ಹಾರಾಡುವುದು ಸಹಜವಾಗಿದ್ದರೂ ಲಘು ವಿಮಾನದಲ್ಲಿ ಹಾರಾಡುತ್ತಿದ್ದ ಸಂಪಾತಿ-ಜಟಾಯುರನ್ನು ಪಕ್ಷಿಗಳು ಎಂದು ಕರೆದಿರುವುದು ಯಾಕೆ? ಜಗತ್ತಿನ ಮೊತ್ತ ಮೊದಲ ಹಾರುವ ಸಹೋದರರು ಸಂಪಾತಿಜಟಾಯುರವರಾದರೂ ಅವರನ್ನು ಗೌರವಿಸದೇ ವಿದೇಶದ ರೈಟ್ ಸಹೋದರರನ್ನು ಮೊತ್ತ ಮೊದಲ ಹಾರುವ ಸಹೋದರರು ಎಂದು ಕರೆದಿರುವುದು ನ್ಯಾಯವೇ? ಕಾಲಿನಿಂದ ತುಳಿದು ಚಲಾಯಿಸುವ ಸಂಪಾತಿಯ ಲಘು ವಿಮಾನದಲ್ಲಿ ಲಂಕೆಗೆ ಹಾರಿದ ಶಕ್ತಿವಂತ ಹನುಮಂತನನ್ನು ಕಪಿಯೆಂದು ಕರೆದಿರುವುದು ಸರಿಯೇ? ಇಂತ ಹಲವಾರು ಪಶ್ನೆಗಳು, ಸಂದೇಹಗಳು ನಮ್ಮ ಮುಂದಿವೆ ಎಂಬುದನ್ನು ಈ ಕೃತಿಯು ತಿಳಿಸಿಕೊಡುತ್ತದೆ.

About the Author

ಪುರುಷೋತ್ತಮ ದಾಸ್ ಹೆಗ್ಗಡೆ

ಪುರುಷೋತ್ತಮ ದಾಸ್ ಹೆಗ್ಗಡೆ ಮೂಲತಃ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಕಲ್ಕುಣಿಕೆಯವರು. ತಂದೆ ಕೆ ಹುಚ್ಚಪ್ಪ ಮತ್ತು ತಾಯಿ ಸುನಂದಮ್ಮ. ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಹುಣಸೂರಿನಲ್ಲಿ ಮುಗಿಸಿ ಮೈಸೂರಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದು 1995 ರಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ನೇಮಕಗೊಂಡು ಪ್ರಸ್ತುತ ಮುಖ್ಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಕ್ಷಣದ ಮಾಡೆಲ್ ಬಗ್ಗೆ ವಿವರಿಸುವ ‘‘Quadruplet Octagonal Model’’ ಎಂಬ ಆಂಗ್ಲಭಾಷೆಯ ...

READ MORE

Related Books