ಗಂಗಪಾಣಿ

Author : ಎಸ್. ಗಂಗಾಧರಯ್ಯ

Pages 248

₹ 280.00




Year of Publication: 2024
Published by: ಜೀರುಂಡೆ ಪುಸ್ತಕ
Address: #27, 3ನೇ ಕ್ರಾಸ್, ಇಂದಿರಾ ನಗರ, ದೊಡ್ಡಬಿದರ ಕಲ್ಲು, ಬೆಂಗಳೂರು-73
Phone: 9742225779

Synopsys

‘ಗಂಗಪಾಣಿ’ ಕೃತಿಯು ಎಸ್. ಗಂಗಾಧರಯ್ಯ ಅವರ ಕಾದಂಬರಿಯಾಗಿದೆ. ಇಲ್ಲಿ ಹುಸಿಯನ್ನೇ ದಿಟವೆಂದು ಆರಾಧಿಸುತ್ತಾ ಸಮಾಜದ ಅವನತಿಗೆ ನಾವೇ ಕಾರಣವಾಗುತ್ತಿರುವುದನ್ನು ತುಂಬಾ ಮಾರ್ಮಿಕವಾಗಿ ಅಭಿವ್ಯಕ್ತಿಗೊಳಿಸಲಾಗಿದೆ. ವಾಸ್ತವತೆಯನ್ನು ಚಿತ್ರಿಸಿರುವ ಲೇಖಕರು ತನ್ನೂರಿನ ಸೊಬಗು, ಅಲ್ಲಿನ ಪರಿಸರ ಹಾಗೂ ಚಿಂತನೆಗಳನ್ನು ಕೂಡ ಕಟ್ಟಿಕೊಟಿದ್ದಾರೆ. ಬಾಳನ ಕಟ್ಟೆ, ಕರುನ ಕಟ್ಟೆ, ಸಮ್ಗಟ್ಟೆ, ಚಿಕ್ಕೆರೆ, ಗುಪ್ಪೀಚ್ಲಳ್ಳ ಎಂಬ ಲೇಖಕರ ಊರಿನ ಕಣ್ಮರೆಯಾದ ಕೆರೆ ಹಾಗೂ ಹಳ್ಳಗಳಿಗೆ ಈ ಕೃತಿಯನ್ನು ಅರ್ಪಿಸಲಾಗಿದೆ. 

ಕೃತಿಯ ಕುರಿತು ಎಸ್ ನಟರಾಜ ಬೂದಾಳು ಹೀಗೆ ಹೇಳಿದ್ದಾರೆ; ಇದು ಕೇವಲ ಮನುಷ್ಯನ ಕತೆಯಲ್ಲ. ನೆಲದ ಕತೆ. ಒಂದು ಅವರಣದಲ್ಲಿನ ಯಾವುದಾದರೊಂದು ಸಂಬಂಧದ ಎಳೆಯನ್ನು ಜಗ್ಗಿದರೆ ಇಡೀ ಲೋಕವೇ ಜುಂ ಅನ್ನುತ್ತದೆ. ಕನ್ನಡದ ಬರಹ ಮತ್ತು ಬದುಕಿನಲ್ಲಿ ಏಕದ್ದೇ ಯಜಮಾನಿಕೆ ದೀರ್ಘಕಾಲ ನಡೆದು ಬಂತು. ಈಗಲೂ ಅದರದ್ದೇ ರಾಜಕಾರಣ. ಇಂತಹ ನಡೆಯನ್ನು ಸರಿ ದಿಕ್ಕಿಗೆ ತರುವ ಅದೆಷ್ಟೋ ಪ್ರಯತ್ನಗಳು ಚರಿತ್ರೆಯಲ್ಲಿ ಮಾತ್ರವಲ್ಲ; ವರ್ತಮಾನದಲ್ಲೂ ನಿರಂತರವಾಗಿ ನಡೆದೇ ಇವೆ. ಈ ಕಾದಂಬರಿ ಅಂತಹ ಒಂದು ಹೊಸ ಕೈಮರವನ್ನು ಆಯಕಟ್ಟಿನ ಜಾಗದಲ್ಲಿ ನೆಡುತ್ತಿದೆ.

About the Author

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕಳ್ಳಿಯವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮತಿಘಟ್ಟದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಪ್ರಕಟಿತ ಕೃತಿಗಳು ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗಿವೆ.  ನವಿಲ ನೆಲ, ಒಂದು ಉದ್ದನೆಯ ನೆರಳು, ಇವರ ಕಥಾ ಸಂಕಲನಗಳು. ’ಬಯಲ ಪರಿಮಳ’ ಎಂಬ ವ್ಯಕ್ತಿಚಿತ್ರ ಸಂಪುಟವನ್ನು ರಚಿಸಿದ್ದಾರೆ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ,- ಎರ್‍ಮಾ, ವಿವಿಧ ಲೇಖಕರ ಕತೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ. ಕುವೆಂಪು ಭಾಷಾಭಾರತಿಗಾಗಿ ...

READ MORE

Related Books