ತುದಿಯಿರದ ಹಾದಿ

Author : ಮೋದೂರು ತೇಜ

Synopsys

ಲೇಖಕ ಮೋದೂರು ತೇಜ ಅವರ ಕಾದಂಬರಿ-ತುದಿಯಿರದ ಹಾದಿ. ಜಾತಿ ಸಂಘರ್ಷ, ಹೊಸ ತಲೆಮಾರಿನ ಪ್ರಶ್ನೆಗಳು, ಜಾತ್ರೆಯಂತಹ ಸಾಂಸ್ಕೃತಿಕ ಸಂದರ್ಭಗಳಿಗೆ ಆಧುನಿಕ ತಲೆಮಾರಿನ ಪ್ರತಿಕ್ರಿಯಿಸುವ ರೀತಿ ಇತ್ಯಾದಿ ಕಾದಂಬರಿಯ ವಸ್ತು. ಬದುಕಿನ ಪ್ರೀತಿಗಾಗಿ ಪಾತ್ರಗಳು ಹಾತೊರೆಯುವುದನ್ನು ಕಾಣಬಹುದು. ವೈಚಾರಿಕತೆ ಮತ್ತು ಸಂಪ್ರದಾಯಗಳ ಮಧ್ಯೆ ಸಂಘರ್ಷಗಳು ಕಾದಂಬರಿಯ ಓದಿಗೆ ವೇಗ ನೀಡುತ್ತವೆ. ಮನುಷ್ಯನ ಸ್ವಾರ್ಥ ಸಾಧನೆಗೆ ಸಂಘರ್ಷಗಳು ಹೇಗೆ ಇಣುಕುತ್ತವೆ ಎಂಬುದರ ಸ್ಪಷ್ಟ ಚಿತ್ರಣ ಇಲ್ಲಿದೆ. .

About the Author

ಮೋದೂರು ತೇಜ

ಲೇಖಕ ಮೋದೂರು ತೇಜ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ -ಆಂಧ್ರ ಗಡಿಭಾಗದ ಮೋದೂರು ಗ್ರಾಮದವರು. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಮೋದೂರು, ಜಾಜೂರು, ಚಳ್ಳಕೆರೆ, ಹಾಗೂ ಚಿಕ್ಕಮಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಮೈಸೂರಿನ ಮುಕ್ತ ವಿ.ವಿ.ಯಿಂದ ಎಂ.ಎ ಪದವಿ ಪಡೆದರು.  ಕೃತಿಗಳು:  ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಿತ ಕವನ ಸಂಕಲನ-‘ಮರದೊಳಗಣ ಕಿಚ್ಚು (2007). ಬುದ್ಧನ ಮೇಲೂ ಯುದ್ಧ’(2010), ಭೂಮಿ ತೂಕದ ಪ್ರೀತಿ(2011), ಅರ್ಧಕ್ಕೆ ನಿಂತ ಚಿತ್ರ (2013), ಹುಲಿವೇಷ ಇವು ಕಥಾ ಸಂಕಲನಗಳು, ವೇದಾವತಿ ತೀರದಲ್ಲಿ (2011) ಹಾಗೂ ತುದಿ ಇರದ ಹಾದಿ-ಇವು ಕಾದಂಬರಿಗಳು, ನಾಡಿನ ವಿವಿಧ ಪತ್ರಿಕೆಗಳು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ  ...

READ MORE

Related Books