ರಾಜಯೋಗಿ

Author : ಬೆಟಗೇರಿ ಕೃಷ್ಣಶರ್ಮ (ಆನಂದಕಂದ)

Pages 186

₹ 1.00
Year of Publication: 1940
Published by: ಮನೋಹರ ಗ್ರಂಥ ಪ್ರಕಾಶನ ಸಮಿತಿ

Synopsys

ರಾಜಯೋಗಿ ಆನಂದಕಂದ ಅವರ ಕಾದಂಬರಿಯಾಗಿದೆ.ಈ ಕಾದಂಬರಿಯಲ್ಲಿಯ ಹೇಮಂಬಿಕೆಯ ಪಾತ್ರ ಅದೇನೋ ಒಂದು ಬಗೆಯಲ್ಲಿ ಅಪೂರ್ಣವಾಗಿರುವುದೆಂದು ಕೆಲವರು ಅಭಿಪ್ರಾಯಪಟ್ಟರಂತ ರಾಜಕೀಯ ತತ್ತ್ವವೊಂದರ (ಪ್ರತಿಯೋಗಿ ಸಹಕಾರಿಕೆಯ) ಪ್ರತೀಕವನ್ನಾಗಿ ಹೇಮಾಂಬಿಕೆಯ ಪಾತ್ರವನ್ನು ನಿರ್ಮಿಸಿರುವುದರಿ೦ದ ಸೆರೆಮನೆಯಲ್ಲಿ ಬಿದ್ದೂ ಹಸಯ ಆಳೆಯ ಕ್ರಿಯಾಶಕ್ತಿ ನಿಂತುಹೋಗುವುದು ಸಹಜನೆ ಆಗಿದೆ, ಮೊದಲಿಗೆ ಕಂಡ ಆವಳ ಕ್ರಿಯಾಶಕ್ತಿ ತ್ಯಾಗಪೂರ್ಣವಾಗಿ ಇರುವುದರಿಂದ, ಹೆಚ್ಚು ಚೈತನ್ಯವುಳ್ಳುದಾಗಿ ತೋರುವುದು, ಅದೇ ಚೈತನ್ಯವನ್ನು ಮುಂದೆಯೂ ಅಪೇಕ್ಷಿಸುವವರಿಗೆ ಆಕೆಯ ಪರಿಸ್ಥಿತಿ ಅದನ್ನು ಅಸಾಧ್ಯವಾಗಿಸುವುದು,ವಿರೂಪಾಕ್ಷ ರಾಯನ ಸಾವಿನ ವರೆಗೆ ಆಕೆಯ ವ್ಯಕ್ತಿತ್ವಕ್ಕೆ ಅವಕಾಶವೇ ಇಲ್ಲದಂತಾಗಿದೆ. ಎಂತಲೆ ಆ ಪಾತ್ರ ಅಪೂರ್ಣವೆಂದು ಒಲದೃಷ್ಟಿಗೆ ಎನಿಸುವುದು ಸಹಜ ಎಂದು ಆನಂದಕಂದ ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.

About the Author

ಬೆಟಗೇರಿ ಕೃಷ್ಣಶರ್ಮ (ಆನಂದಕಂದ)
(16 April 1900 - 30 October 1982)

ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..  ಕೃಷ್ಣಶರ್ಮರು 12ನೇ  ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ  ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು  ಹಾಗೂ  ಮರು ವರ್ಷವೇ ಪತ್ನಿ ತೀರಿ ಹೋದರು. 5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ...

READ MORE

Related Books