ಪದರುಗಳು

Author : ವಿವೇಕಾನಂದ ಕಾಮತ್

Pages 144

₹ 150.00




Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಪದರುಗಳು’ ವಿವೇಕಾನಂದ ಕಾಮತ್ ಅವರ ಕಾದಂಬರಿಯಾಗಿದೆ. ಈ ಕೃತಿಗೆ ಎಂ.ಆರ್. ದತ್ತಾತ್ರಿ ಅವರು ಬೆನ್ನುಡಿ ಬರೆದಿದ್ದು, ಕೃತಿಯ ಕುರಿತು ತಿಳಿಸುತ್ತಾ 'ಒಂದು ಹೆಣ್ಣಿನ ಅಂತರಂಗವನ್ನು ಮನೋ-ವೈಜ್ಞಾನಿಕ ನೆಲೆಯಲ್ಲಿ ನೋಡುವ ಮತ್ತು ಆ ಮೂಲಕ ಕಥನ ಮತ್ತು ವಿಜ್ಞಾನವನ್ನು ಬೆಸೆಯುವ ಬರಹವಿದು. ಇಲ್ಲಿ ಅಂತಃಕರಣವಿದೆ, ಪ್ರೀತಿಯಿದೆ, ವಾತ್ಸಲ್ಯವಿದೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನೊಂದ ಹೆಣ್ಣಿಗೆ ಸಮಾಧಾನ ಕೊಡಬೇಕೆನ್ನುವ ಸಾಮಾಜಿಕ ಜವಾಬ್ದಾರಿಯಿದೆ. ನಾವು ಚಂದ್ರನ ಮೇಲೆ ಕಾಲಿಟ್ಟು ಗ್ರಹ ತಾರೆಗಳೆಡೆಗೆ ಕೈಚಾಚಿದರೂ, ಪ್ರಖರ ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸಲು ಹೊರಟರೂ, ಮನುಷ್ಯನ ಮನಸ್ಸು ನಮಗಿನ್ನೂ ನಿಗೂಢ. ಮನುಷ್ಯ ವರ್ತನೆಗಳು ನಮ್ಮ ಊಹೆಗೆ ನಿಲುಕದವು. ಅಂತಹ ಒಂದು ಗಾಢಗುಟ್ಟಿನ ಹಿಂದೆ ಹೊರಟ ಈ ಕಾದಂಬರಿಯು ಮನೋಲೋಕದ ಅನೇಕ ಪದರುಗಳನ್ನು ದರ್ಶಿಸುತ್ತದೆ. ನುರಿತ ಮತ್ತು ಸೂಕ್ಷ್ಮ, ಕತೆಗಾರರಾದ ವಿವೇಕಾನಂದ ಕಾಮತರು, ವಿಭಿನ್ನ ಪಾತ್ರಗಳು ನಮ್ಮ ಓದಿಗೆ ಸುಲಲಿತವಾಗಿ ಇಳಿಯುವಂತೆ ಈ ಕಾದಂಬರಿಯನ್ನು ಸೃಷ್ಟಿಸಿದ್ದಾರೆ ಎಂದಿದ್ದಾರೆ. 

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books