ಆಶ್ವಾಸನ

Author : ಉಷಾ ನವರತ್ನರಾಂ

Pages 236

₹ 6.00
Year of Publication: 1976
Published by: ರಾಜಲಕ್ಷ್ಮೀ ಪ್ರಕಾಶನ
Address: ಬಳೆಪೇಟೆ ಚೌಕ ಬೆಂಗಳೂರು-560053

Synopsys

ʼಆಶ್ವಾಸನʼ ಕಾದಂಬರಿಯು ಲೇಖಕಿ ಉಷಾ ನವರತ್ನರಾಂ ಅವರು ಬರೆದಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಮಧ್ಯಮ ಕುಟುಂಬದ ಸುತ್ತ ಈ ಕಾದಂಬರಿ ವಸ್ತುವಿದೆ. ಬದುಕಿನ ಶೈಲಿಯ ಜೊತೆ ಆಚರಣೆಗಳು ಮುಂತಾದ ಹಲವಾರು ವಿಷಯಗಳು ಕಾದಂಬರಿಯಲ್ಲಿ ಅಡಕವಾಗಿದೆ.ಮದ್ಯಮ ಕುಟುಂಬವೊಂದು ಬದುಕನ್ನು ಸವೆಸಿದ್ದರ ಭಾಗವೇ ವಸ್ತುವಿನ ಕೇಂದ್ರವಾಗಿದೆ. ಸಂಬಂಧಗಳ ಮಹತ್ವವವನ್ನು ಪ್ರತಿಪಾದಿಸುವುದು ಕಾದಂಬರಿಯ ಉದ್ದೇಶ. 

About the Author

ಉಷಾ ನವರತ್ನರಾಂ
(23 November 1939 - 10 October 2000)

ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...

READ MORE

Related Books