ಮಂಪರು

Author : ಚೀಮನಹಳ್ಳಿ ರಮೇಶಬಾಬು

Pages 243

₹ 204.00




Year of Publication: 2023
Published by: ಅನಿಮಾ ಪುಸ್ತಕ ಚೀಮನಹಳ್ಳಿ
Address: ಇಮರೆಡ್ಡಿಹಳ್ಳಿ ಪೋಸ್ಟ್, ಚಿಂತಾಮಣಿ - 563125, ಚಿಕ್ಕಬಳ್ಳಾಪುರ

Synopsys

‘ಮಂಪರು’ ಚೀಮನಹಳ್ಳಿ ರಮೇಶಬಾಬು ಅವರ ಕಾದಂಬರಿಯಾಗಿದೆ. ನಮ್ಮ ಮೇಲಿನ ಕಣ್ಗಾವಲುಗಳು ನಮಗೆ ಯಾವತ್ತೂ ರುಚಿಸುವುದಿಲ್ಲವೆಂದು ಎಂಥಾ ಪರಮ ಸತ್ಯ, ಅವರವರ ಕೆಲಸ ಅವರವರು ಅಚ್ಚುಕಟ್ಟಾಗಿ ಮಾಡಿಕೊಂಡು ಹೋದರೆ ಎಲ್ಲವೂ ಸಲೀಸು, ಅಂತಹ ದೊಡ್ಡ ಫಿಲಾಸಫಿಯೇನೂ ಅಲ್ಲ, ಆಥವಾ ಹೌದು, ಆಗ ಈ ಮನುಷ್ಯ ಸಹಜ ಮಾನಸಿಕ ರೋಗರುಜಿನಗಳ್ಳಾವುವೂ ಹತ್ತಿರ ಸುಳಿಯಲಾರವು. ಈ ವ್ಯಂಗ್ಯ, ಅಸೂಯೆ, ಉಡಾಫೆ, ಕುತಂತ್ರ, ಹೇರಿಕೆ, ದಬ್ಬಾಳಿಕೆ, ಯಾವಾಗಲೂ ಕಹಳೆ ಊದುತ್ತಲೇ ಇರುವ ಯುದ್ಧ ಮನೋಭೂಮಿಕೆ. ಅಸಲಿಗೆ ಇವೆಲ್ಲವುಗಳಿಂದ ಮನುಷ್ಯನಾದವನೊಬ್ಬ ಬಿಡುಗಡೆ ಹೊಂದುವುದು ಅಷ್ಟೊಂದು ಸರಳವೆ.

ಪ್ರತಿಯೊಬ್ಬ ಮನುಷ್ಯನೂ ತನ್ನ ವ್ಯಕ್ತಿತ್ವಕ್ಕನುಸಾರವಾಗಿ ಸಹಜ ವಿಲಾಸಫಿಯೊಂದಕ್ಕೆ ಜೋತು ಬಿದ್ದಿರುವುದಿಲ್ಲವೆ, ಗೋಡೆಯ ಮೊಳೆಗೆ ನೇತು ಹಾಕಿರುವ ಅಂಗಿಯ ಹಾಗೆ, ಗೋಡೆಯೊಂದು ನಮ್ಮ ಮನೋಭೂಮಿಕೆಯಾದರೆ ಮೊಳೆಯನ್ನು ನಾವೇ ಹೊಡೆದುಕೊಂಡಿರುತ್ತೇವೆ. ಅಲ್ಲಿ ಅಂಗಿಯೊಂದು ಫಿಲಾಸಪಿ ಅಂಗಿಯಲ್ಲದಿದ್ದರೆ ಮತ್ತೊಂದು. ಮೊಳೆ ಹೊಡೆದುಕೊಳ್ಳುವಾಗಿನ ನೋವಿಗೆ ಅದರ ಸಾಂದ್ರತೆಗೆ ಕುಗ್ಗಿ ಹೋಗಿರುವುದರ ಗಮನಿಕೆಯು ಮತ್ತೊಬ್ಬರಿಗೆ ಬರದಿರಲೆಂದು ಕೈಗೆ ಸಿಕ್ಕಿದ್ದನ್ನು ಮನಸ್ಸಿಗೆ ದಕ್ಕಿದ್ದೆಂದು ನಂಬಿ ನೇತುಹಾಕುತ್ತೇವೆ. ಅಸಲಿಗೆ ನಾವು ಮೊಳೆ ಹೊಡೆದುಕೊಳ್ಳುವುದೇ ನಮ್ಮ ಹಣೆಗಳಿಗೆ. ಅದರಾಚೆಗಿನ ಸಕಲವೆಲ್ಲವೂ ನಮ್ಮ ನಮ್ಮ ನಂಬಿಕೆಗಳಷ್ಟೇ. ಇಲ್ಲಿ ಯಾರಿಗಿರುವುದಿಲ್ಲ ಈ ಇಂತಾ ರೋಗರುಜನಗಳು, ತಾನೂ ಆದರಿಂದ ಹೊರತಾಗಿಲ್ಲವಲ್ಲ, ಎಲ್ಲ ಬಗೆಯ ರಾಗದ್ವೇಷಗಳೂ ತನ್ನೊಳಗೂ ಇದಾವಲ್ಲ, ರಾಜೀವ, ರತ್ನಾಕರ, ಬಚ್ಚರೆಡ್ಡಿ, ಅಮ್ಮ, ನಮಿತ, ಅಲ್ಲಾಭಕ್ಷಿ ಕಡೆಗೆ ಆ ಪಾರ್ಕಿನ ಆಜುಬಾಜಿನಲ್ಲಿ ಅಡ್ಡಾಡುವ ಹುಚ್ಚನೆಂಬ ಸಂತ... ಎಲ್ಲವೂ ತನ್ನ ನಡವಳಿಕೆಯ ಸೂಚಕಗಳೇನೋ ಎಂದು ಅವಳಿಗೆ ಅನಿಸತೊಡಗಿತು. ತನ್ನ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಗುಣಗಳೇನೋ ಎಂದು ಅನಿಸತೊಡಗಿತು ನೀರಲ್ಲಾ ಖಾಲಿಯಾದ ಕರೆಯೊಂದರ ಏರಿಯ ಬುಡದ ತಗ್ಗುಗಳಲ್ಲಿ ಉಳಿದ ಒಂದಿಷ್ಟು ಮಡ್ಡಿ ನೀರಿನಲ್ಲಿ ಬದುಕಿಗಾಗಿ ಪುಟುಪುಟನೆ ನೆಗೆದು ಒದ್ದಾಡುತ್ತವಲ್ಲ ಮೀನುಗಳು... ಹಾಗೆ ಅವರೆಲ್ಲರೂ ತನ್ನ ಮನಸ್ಸಿನೊಳಗೆ ಒದ್ದಾಡುತ್ತಿದ್ದಾರೆನೋ ಎಂದನಿಸ ತೊಡಗಿತು. (ಒಳಪುಟಗಳಿಂದ)

About the Author

ಚೀಮನಹಳ್ಳಿ ರಮೇಶಬಾಬು
(10 July 1974)

ಸಂಶೋಧನಾ ವಿಜ್ಞಾನಿಯಾಗಿರುವ ಚೀಮನಹಳ್ಳಿ ರಮೇಶಬಾಬು ಚಿಂತಾಮಣಿ  ತಾಲ್ಲೂಕಿನ ಚೀಮನಹಳ್ಳಿಯವರು. ‘ಪ್ರಶ್ನೆ ಮತ್ತು ದೇವರು’, ‘ಎರಡು ಲೋಟಗಳು’, ‘ಮಾಯಾ ಸರೋವರ’ ಎಂಬ ಕವಿತಾ ಸಂಗ್ರಹಗಳನ್ನು ‘ನಾಗ್ದಾಳೆ’ ಎಂಬ ಖಂಡಕಾವ್ಯವನ್ನು ‘ಹಸ್ತಬಲಿ’ ಎಂಬ ಕಥಾ ಸಂಕಲನ ಹಾಗು ‘ಹದ’, ‘ಬಲಿಹಾರ’, ‘ಟೈರ್ಸಾಮಿ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು ಹುವ್ವು’ ಇವರ ಸಂಪಾದಕತ್ವದಲ್ಲಿ ಬಂದಿರುವ ಅನುವಾದಿತ ಕವಿತೆಗಳ ಸಂಗ್ರಹ. ಮಾಸ್ತಿ ಕಾದಂಬರಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬೆಟಗೆರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ, ವೀಚಿ ಉದಯೋನ್ಮುಖ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ...

READ MORE

Related Books