ಹೆಣ್ಣು ಹಾವು

Author : ಕೃಷ್ಣಮೂರ್ತಿ ಪುರಾಣಿಕ

₹ 160.00




Published by: ಸಾಹಿತ್ಯ ಸಂತೆ

Synopsys

ಲೇಖಕ ಕೃಷ್ಣಮೂರ್ತಿ ಪುರಾಣಿಕ ಅವರ ಸಾಮಾಜಿಕ ಕಾದಂಬರಿ ‘ಹೆಣ್ಣು ಹಾವು’. ಶಾರದಾಬಾಯಿ ಮತ್ತೆ ಸಂಪನ್ನ ರಾಯರ ಆಗರ್ಭ ಶ್ರೀಮಂತರು... ಇವರಿಬ್ಬರು ಒಮ್ಮೆ ಎಲ್ಲಿಗೂ ಹೋಗಿ ಬರುತ್ತಿರುವಾಗ ಡ್ರೈವರ್ ಅಜಾಗರೂಕತೆಯಿಂದ 14 ವರ್ಷದ ಹುಡುಗನಿಗೆ ಕಾರು ಗುದ್ದುತ್ತದೆ. ಈ ಒಂದು ಘಟನೆ ಮಂಡೋದರಿ ಕುಟುಂಬದ ಭವಿಷ್ಯವನ್ನೇ ಬದಲಾಯಿಸಿಬಿಡುತ್ತದೆ. ಕಡುಬಡವರಾದ ಇವರನ್ನು ಶಾರದಾಬಾಯಿ ತಮ್ಮ ಮನೆಯಲ್ಲಿ ಕೆಲಸದವರನ್ನಾಗಿ ಇಟ್ಟುಕೊಳ್ಳುತ್ತಾರೆ... ಇಬ್ಬರು ಮಕ್ಕಳಿಗೂ ವಿದ್ಯೆ ಇವರೇ ಕೊಡುತ್ತಾರೆ... ನಿಧಾನಕ್ಕೆ ಮಂಡೋದರಿಗೆ ಇವರ ಸ್ವಭಾವ ಚಿತ್ರವಾಗಿ ಕಾಣಿಸುತ್ತದೆ. ದುಡಿದು ತಿಂದರೂ ತೊಂದರೆ ಇಲ್ಲ, ಇಲ್ಲಿಂದ ಹೇಗಾದರೂ ಹೊರಹೋಗಬೇಕು ಅನ್ನುವಷ್ಟರಲ್ಲಿ ವಿಚಿತ್ರವಾದ ಘಟನೆಗಳು ನಡೆದು ಮಂಡೋದರಿಯ ಮಗನ ಮೇಲೆ ಕೊಲೆಯ ಆರೋಪ ಬರುವಂತಾಗುತ್ತದೆ... ಆದರೆ ಚಾಣಾಕ್ಷನಾದ ಗುರುದತ್ತ ಇವೆಲ್ಲದರಿಂದ ತನ್ನ ತಾಯಿ ಮತ್ತು ಚೇತಾಳನ್ನು ಹೊರ ತರುತ್ತಾನೆ... ಹೇಗೆಂದು ಓದಿಯೇ ತಿಳಿಯಬೇಕು... ಜೊತೆಜೊತೆಗೆ ಆ ಹೆಣ್ಣು ಹಾವು ಯಾರು... ಇದು ಕಥೆಯ ಕೊನೆಯಲ್ಲಿ ತಿಳಿಯುತ್ತದೆ..... ಉತ್ತರ ಕರ್ನಾಟಕದ ಸೊಗಡಿನ ಭಾಷೆಯಲ್ಲಿ ಕಥೆಯು ಬಲು ಸುಂದರವಾಗಿ ಮೂಡಿಬಂದಿದೆ.

About the Author

ಕೃಷ್ಣಮೂರ್ತಿ ಪುರಾಣಿಕ
(05 September 1911 - 09 November 1985)

ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು  ಬೆಳ್ಳೆತೆರೆ ಕಂಡಿವೆ.  'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...

READ MORE

Related Books