ಶ್ರೀ ಚಾಮುಂಡೇಶ್ವರಿ ಭವನ

Author : ವ್ಯಾಸರಾವ್ ನಿಂಜೂರ್

Pages 304

₹ 295.00
Year of Publication: 1991
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಲೇಖಕರೂ, ಕತೆಗಾರರೂ ಆದ ಡಾ. ವ್ಯಾಸರಾವ್ ನಿಂಜೂರ್‍ ಅವರ ಕಾದಂಬರಿ ’ಶ್ರೀ ಚಾಮುಂಡೇಶ್ವರಿ ಭವನ’.

ಪ್ರಸ್ತುತ ಈ ಕಾದಂಬರಿಯಲ್ಲಿ  ಕರಾವಳಿಯ ಹಳ್ಳಿಯ ಬದುಕಿನ ಚಿತ್ರಣವನ್ನು ನೀಡುವಂತದ್ದು. ಈ ಕೃತಿ ಕೆಮ್ಮಣ್ಣುವಿನ ಹಾಗೂ ಆಸುಪಾಸಿನ ಜನರ ಆಕರ್ಷಣೀಯ ಕೇಂದ್ರವಾಗುವುದು ಒಂದು ಹೋಟೆಲ್ಲಿನ ವ್ಯವಹಾರವನ್ನು ದಾಖಲಿಸುವ ಮೂಲಕ. ಮತ್ತು ಹೋಟೆಲ್ಲಿನ ನಿತ್ಯ ಸಂದರ್ಶಕರ ಸ್ವಭಾವ ಚಿತ್ರಣ, ಹಳ್ಳಿಯ ಹತ್ತು ಸಮಸ್ತರೆನಿಸುವ ಕೆಲವು ಪಾತ್ರ ಸೃಷ್ಟಿಗಳು ಈ ಕಾದಂಬರಿಯಲ್ಲಿ ಪ್ರಮುಖವಾಗಿವೆ.

’ಶ್ರೀ ಚಾಮುಂಡೇಶ್ವರಿ ಭವನ’ ಮುಗ್ದವೆಂದು ಮೇಲೆ ಕಾಣುವ, ಆದರೆ ಭ್ರಷ್ಟತೆ ಲಂಪಟತನ, ಕ್ಷುದ್ರತೆ, ಜಾತೀಯತೆಗಳ ಒಳನೋಟಗಳೊಂದಿಗೆ ಹೆಣಗಾಟ ನಡೆಸುವ ಕೆಮ್ಮಣ್ಣಿನ ಬದುಕಿನ ಮೂಕ ಸಾಕ್ಷಿಯಾಗಿ ಈ ಕೃತಿ ನಿಲ್ಲುತ್ತದೆ. ಈ ಕೃತಿಯಲ್ಲಿ ಗ್ರಾಮೀಣ ಪರಿಸರದ ಸಾಮಾಜಿಕ ವ್ಯವಸ್ಥೆಯು, ಬದಲಾಗುತ್ತಲೂ ಬದಲಾವಣೆಯನ್ನು ಸ್ವೀಕರಿಸಲು ಸಿದ್ದವಿರದ ವ್ಯವಸ್ಥೆಯ ಸೊಗಸಾದ ಚಿತ್ರಣ ಈ ಕೃತಿಯಲ್ಲಿ ಮೂಡಿಬಂದಿದೆ.

’ಶ್ರೀ ಚಾಮುಂಡೇಶ್ವರಿ ಭವನ’ವನ್ನು ಕಟ್ಟಿದಾತ ತನ್ನ ವ್ಯಕ್ತಿತ್ವದಲ್ಲಿ ಬೆರೆತಿರುವ ದ್ಚಂದ್ವಗಳ ಜತೆಗೇ, ಆ ಹಳ್ಳಿಯಲ್ಲಿ ಬೆರೆತು ಬಾಳಬೇಕಾದ ಹತ್ತು ಸಮಸ್ತರ ಸ್ವಭಾವ ಸೂಕ್ಷ್ಮತೆಗಳನ್ನು ಪರಿಚಯಿಸುತ್ತ, ಕೊನೆಗೆ ತನ್ನ ವೈಯಕ್ತಿಕ ಹಾಗೂ ಸಾಮಾಜಿಕ ಹಿತಗಳು ಅಡಗಿರುವ ಸ್ವಾರ್ಥದೊಳಗೆ ಸೇರಿಕೊಳ್ಳುವ ಚಿತ್ರಣ ಈ ಕಾದಂಬರಿಯಲ್ಲಿದೆ.

About the Author

ವ್ಯಾಸರಾವ್ ನಿಂಜೂರ್
(06 October 1940)

ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್‌ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ತೆಂಕ ನಿಡಿಯೂರಿನಲ್ಲಿ. ತಂದೆ ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಗರಡಿ ಮಜಲು, ಕೊಡವೂರು, ಮಿಲಾಗ್ರಿಸ್ ಹೈಸ್ಕೂಲು ಮುಂತಾದೆಡೆ ಪಡೆದ ಅವರು, ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಬಿ.ಎಸ್ಸಿ. ಪದವಿಯನ್ನೂ ಪಡೆದರು. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಗಳನ್ನು ಪಡೆದರು.  ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದ ಅವರು, ನಂತರ ಮುಂಬಯಿಯ ಭಾಭಾ ಪರಮಾಣು ಸಂಶೋಧನ ಕೇಂದ್ರದ ಬಯೋ ಕೆಮಿಸ್ಟ್ರಿ ...

READ MORE

Related Books