ಕಾಲಯಾತ್ರೆ

Author : ಕೃಷ್ಣಮೂರ್ತಿ ಹನೂರು

Pages 120

₹ 120.00
Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮ್‍ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080- 2661 7100

Synopsys

‘ಕಾಲ ಯಾತ್ರೆ’ ಕೃಷ್ಣಮೂರ್ತಿ ಹನೂರು ಅವರ ಕಾದಂಬರಿ. ಹಿರಿಯ ಸಾಹಿತಿ ಹೆಚ್.ಎಸ್. ಶಿವಪ್ರಕಾಶ್ ಅವರು ಕೃತಿಗೆ ಬೆನ್ನುಡಿ ಬರೆದು ‘ಹನೂರರು ತಮ್ಮ ಹಳೆಯ ಯಶಸ್ವೀ ಪ್ರಯೋಗಗಳನ್ನು ಪುನರಾರ್ವತಿಸದೇ  ಹೊಸ ದಾರಿಯನ್ನು ಹಿಡಿದು ಹೊಸ ರೀತಿಯ ಅನುಭವಗಳನ್ನು ತಮ್ಮ ಅಪರೂಪದ ಕಥನಕಲೆಯ ಮೂಲಕ ನಿರೂಪಿಸಿದ್ದಾರೆ. ಅವರ ಹಿಂದಿನ ಕಾದಂಬರಿಗಳು ಪ್ರಧಾನವಾಗಿ ಗ್ರಾಮೀಣ ಬದುಕನ್ನು ಅನ್ವೇಷಿಸುತ್ತಿದ್ದವು. ಈ ಸಲ ಅವರ ಕಥನಕಲೆ ಮಹಾನ್ ನಗರದ ಚಕ್ರವ್ಯೂಹದ ಅನುಭವಗಳನ್ನು ಗ್ರಾಮಗಳ ಹಿನ್ನೆಲೆಯಿಂದ ಬಂದ ಅಮಾಯಕ ಪಾತ್ರಗಳ ಬೆರಗುಗಣ್ಣುಗಳಿಂದ ಚಿತ್ರಿಸಿದ್ದಾರೆ. ಈ ಬಗೆಯ ನಿರೂಪಣೆಗೆ ಕೆಲವು ಪೂರ್ವ ಮಾದರಿಗಳಿದ್ದರೂ ಹನೂರರು ಅದನ್ನು ನಿರೂಪಿಸಿರುವ ಬಗೆ ವಿನೂತನ. ಅವರು ಚಿತ್ರಿಸಿರುವ ನಗರ ಗ್ಲೋಬಲೀಕರಣದ ತುಳಿತದಡಿ ನುಚ್ಚುನೂರಾಗುತ್ತಿರುವ ಮಾನವರೂಪೀ ರೋಬೋಗಳ ನಗರ, ಮಾನವೀಯತೆಯ ಕೊನೆಯ ವಾರಸುದಾರರಾದ ವಿನಾಶಗೊಳ್ಳುತ್ತಿರುವ ಹಳ್ಳಿಯ ಅಮಾಯಕರು ಹೇಗೆ ಅದರೊಡನೆ ಮುಖಾಮುಖಿಯಾಗುತ್ತಾರೆ ಎಂಬುದನ್ನು ತಮ್ಮ ಸಮರ್ಥ ಭಾಷಿಕ ಸಂಪನ್ಮೂಲಗಳನ್ನು ಬಳಸಿ, ಅದರ ದುರಂತಮಯ ಮತ್ತು ಕರಾಳ ದರ್ಶನವನ್ನು ಓದುಗರಿಗೆ ನೀಡುತ್ತಾ,  ಹದಗೆಟ್ಟ ಸಮಕಾಲೀನ ಬದುಕಿಗೆ ಅದರ ಹದಗೆಟ್ಟ ಮೋರೆಯನ್ನು ಮುಲಾಜುಗಳಿಲ್ಲದೆ ಈ ಕೃತಿಯ ಕನ್ನಡಿಯಲ್ಲಿ ತೋರಿಸುತ್ತಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಕೃಷ್ಣಮೂರ್ತಿ ಹನೂರು

ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಮಾಡಿ ಸಂದರ್ಶಕ ಪ್ರಾಧ್ಯಾಪಕರಾಗಿ. 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಆಜ್ಞಾತನೊಬ್ಬನ ಆತ್ಮ ಚರಿತ್ರೆ ಕಾದಂಬರಿ ಓದುಗರ ಮೇರೆಯಿಲ್ಲದ ಮೆಚ್ಚುಗೆ ಪಡೆದಿದೆ. ಅದೀಗ ಇಂಗ್ಲೀಷ್ ಗೆ ಅನುವಾದಗೊಂಡು ಪ್ರಕಟವಾಗಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರು ಸಂಪಾದಿಸಿದ ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ...

READ MORE

Conversation

Related Books