ನಿಲುಕದ ನಕ್ಷತ್ರ

Author : ಅಶ್ವಿನಿ (ಎಂ. ವಿ. ಕನಕಮ್ಮ)

Pages 322

₹ 48.00




Year of Publication: 1994
Published by: ಸುಘೋಷ ಸಾಹಿತ್ಯ
Address: 126, 28ನೇ ಅಡ್ಡರಸ್ತೆ, 7ನೇ ಬ್ಲಾಕ್‌ ಜಯನಗರ ಬೆಂಗಳೂರು-560082.

Synopsys

'ನಿಲುಕದ ನಕ್ಷತ್ರ' ಲೇಖಕಿ ಅಶ್ವಿನಿ (ಎಂ.ವಿ ಕನಕಮ್ಮ) ಅವರ ಸಾಮಾಜಿಕ ಕಾದಂಬರಿ. ಆಕಸ್ಮಿಕವಾಗಿ ಭೇಟಿಯಾಗುವ ಗೆಳತಿಯ ಜೊತೆ ತನ್ನ ಜೀವನದ ಆಗು ಹೋಗುಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ಅಪರಿಚಿತ ಸಂಬಂಧಗಳ ಸುತ್ತ ಕತೆಯು ಸುತ್ತುತ್ತದೆ. ಆದರೆ ಮುಂದೆ ಅವರಿಬ್ಬರೇ ಬದ್ದ ವೈರಿಗಳಾಗುವ ತರುವುಗಳನ್ನು ಕಾದಂಬರಿಯು ಹೊಂದಿದೆ. ಇದರ ಜೊತೆಗೆ, ಕೌಟುಂಬಿಕ ನೋವು ನಲಿವುಗಳ ಜೊತೆಗೆ ಹಾಸ್ಯ ಮಿಶ್ರಿತವಾಗಿ ಸಾಗುವ ಕತೆಯಲ್ಲಿ ವಿವಿಧ ಸಂಪ್ರದಾಯಗಳು, ಸಮಾಜದ ಅಚಾರ ವಿಚಾರಗಳು, ಅದರಿಂದ ಹೆಣ್ಣು ಪಡುವ ಕಷ್ಟ ಮತ್ತು ಸಂಸಾರದಲ್ಲಿ ಆಗಾಗ ಮೂಡುವ ಕಲಹಗಳ ಜೊತೆಗೆ ಕತೆ ಸಾಗುತ್ತದೆ. 

About the Author

ಅಶ್ವಿನಿ (ಎಂ. ವಿ. ಕನಕಮ್ಮ)
(01 November 1933)

ಕಾದಂಬರಿಗಾರ್ತಿ ಅಶ್ವಿನಿ ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಂಗಲಂ ಎಂಬ ಗ್ರಾಮದಲ್ಲಿ. ತಂದೆ ವೆಂಕಟ ರಾಘವಾಚಾರ್ಯರು, ತಾಯಿ ಲಕ್ಷ್ಮಮ್ಮ. ರಾಮಾಯಣ, ಮಹಾಭಾರತ ಕಥೆಗಳನ್ನು ಮಿಡ್ಲೆ ಸ್ಕೂಲಿನಲ್ಲಿದ್ದಾಗಲೇ ಓದಿ ಮುಗಿಸಿದ್ದರು. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಯ್ಯನವರು ಹೆಚ್ಚಿನ ಪ್ರೋತ್ಸಾಹ ನೀಡಿದರು.  ಅಕೌಂಟೆಂಟ್‌ರವರ ಕಚೇರಿಯಲ್ಲಿದ್ದಾಗಲೇ ಕಿರು ಪ್ರಹಸನಗಳನ್ನು ಆಕಾಶವಾಣಿಗಾಗಿ ಬರೆದು ಕೊಡತೊಡಗಿದ್ದರು. ಹೀಗೆ ಪ್ರಾರಂಭವಾದ ಇವರ ಸಾಹಿತ್ಯದ ಬರವಣಿಗೆ ಸಾಗುತ್ತಾ ಬಂದು ‘ನಿಲುಕದ ನಕ್ಷತ್ರ’ ಎಂಬ ಕಾದಂಬರಿ ರಚಿಸಿದರು. ನಂತರ ವೆಂಕಟೂವಿನ ಬುಗುರಿ, ತುಪ್ಪದ ದೀಪ,ನಾನೇಕೆ ಬೇಡವಾದೆ ಮುಂತಾದ ಇಪ್ಪತ್ತು ಕಥೆಗಳು ಸುಧಾ, ಮಯೂರ, ಪ್ರಜಾಮತ, ಕರ್ಮವೀರ ...

READ MORE

Related Books