ನಾಡಿ ಮಿಡಿತ

Author : ಕೆ. ಶ್ರೀನಾಥ

Pages 240

₹ 225.00




Year of Publication: 2018
Published by: ಆಕೃತಿ ಪುಸ್ತಕ
Address: ರಾಜಾಜಿನಗರ, ಬೆಂಗಳೂರು.

Synopsys

ಲೇಖಕ ಕೆ. ಶ್ರೀನಾಥ ಅವರ ಕಾದಂಬರಿ-ನಾಡಿ ಮಿಡಿತ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳು ಓದುಗರ ಗಮನ ಸೆಳೆಯುತ್ತವೆ. ವ್ಯಕ್ತಿಯ ವರ್ತನೆಗೆ ಕಾರ್ಯ-ಕಾರಣ ಸಂಬಂಧವನ್ನು ಪ್ರತಿಪಾದಿಸುವ ವಸ್ತುವನ್ನು ಈ ಕಾದಂಬರಿ ಒಳಗೊಂಡಿದೆ. ಲೇಖಕರ ಮೊದಲ ಕೃತಿ ಇದು. ದ್ವಂದ್ವ ಹಾಗೂ ಅಸಮಾನತೆಯ ಆಯಾಮಗಳನ್ನು ಪಾತ್ರಗಳಿಗೆ ಹೆಚ್ಚಾಗಿ ಅನ್ವಯಿಸಲಾಗಿದ್ದು, ಒಬ್ಬನಿಗೆ ಬಡತನವು ತ್ಯಾಗ ಮನೋಭಾವವನ್ನು ಕಲಿಸುತ್ತಿದ್ದರೆ ಮತ್ತೊಬ್ಬನಿಗೆ ದಾಹ ಹೆಚ್ಚಿಸುತ್ತದೆ. ಇಂತಹ ವೈರುಧ್ಯಗಳನ್ನು ಕಥಾ ವಸ್ತುವನ್ನಾಗಿಸಿಕೊಂಡ ಈ ಕಾದಂಬರಿಯು, ಆರೋಗ್ಯಕಾರಿ ಸಮಾಜ ನಿರ್ಮಾಣದ ಆಶಯವನ್ನು ಒಳಗೊಂಡಿದೆ.

About the Author

ಕೆ. ಶ್ರೀನಾಥ

ಲೇಖಕ, ಅನುವಾದಕ ಕೆ. ಶ್ರೀನಾಥ್ ಕೈಗಾರಿಕೋದ್ಯಮಿಯಾಗಿದ್ದವರು, ಸದ್ಯ ವೃತ್ತಿಯಿಂದ ನಿವೃತ್ತರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ನಾಡಿಮಿಡಿತ' ಇವರ ಮೊದಲ ಕಾದಂಬರಿ. ಸಾಹಿತ್ಯಕವಾಗಿ ಮಾತ್ರವಲ್ಲದೇ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ಶ್ರೀನಾಥ್ ಅವರು ಅನೇಕ ಧಾರಾವಾಹಿ ಹಾಗೂ ಸಿನೆಮಾಗಳಲ್ಲಿಯೂ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಆಕ್ರಮಣ ಇವರು ನಟಿಸಿದ ಮೊದಲ ಚಿತ್ರ. ಶ್ರೀನಾಥ್ ಅವರ ಮೊದಲ ಕೃತಿ ಇಂಗ್ಲೀಷ್ ಕಾದಂಬರಿ Souls od Samaritans. ಈ ಕೃತಿಯನ್ನು ಪೆಂಗ್ವಿನ್ ಅಂಗಸಂಸ್ಥೆಯಾದ ಪಾರ್ಟ್ರಿಡ್ಜ್ ಪ್ರಕಟಿಸಿದೆ. ಅನುವಾದಕರಾಗಿ ಪರ್ಲ್ ಎಸ್, ಬಕ್ ಅವರ ಗುಡ್ ಅರ್ತ್, ಮತ್ತು ಸ್ಪಾನಿಶ್ ನ ಮಾರ್ಕೋಸ್ ...

READ MORE

Related Books