ಗೌರಿ

Author : ಕೆ. ಸತ್ಯನಾರಾಯಣ

Pages 182

₹ 100.00




Year of Publication: 2009
Published by: ಸ್ನೇಹಾ ಪ್ರಿಂಟರ್ಸ್‌
Address: ಬೆಂಗಳೂರು

Synopsys

ಕತೆಗಾರ ಕೆ ಸತ್ಯನಾರಾಯಣ ಅವರ ಕಾದಂಬರಿ. 1992ರಲ್ಲಿ ಮೊದಲ ಮುದ್ರಣ ಕಂಡಿದ್ದ ಅದರ ಮರುಮುದ್ರಣ ಇದು. ಜನತಾ ಪಕ್ಷಕ್ಕೆ ಸೇರಿದ್ದ ಸರ್ವೋದಯ ಕಾರ್ಯಕರ್ತರೂ ಆಗಿದ್ದ ಒಕ್ಕಲಿಗರ ಮನೆಯಲ್ಲಿ ವಾಸವಾಗಿದ್ದ ಸೂಕ್ಷ್ಮಸಂವೇದಿ ಮನೆಗೆಲಸದವಳೊಬ್ಬಳಿಂದ ನನಗೆ ಈ ಪಾತ್ರಕ್ಕೆ ಪ್ರೆರಣೆ ಸಿಕ್ಕಿತು ಎಂದು ಗೌರಿ ಪಾತ್ರ ಸೃಷ್ಟಿಯಾದ ಹಿನ್ನೆಲೆಯನ್ನು ಕೆ ಸತ್ಯನಾರಾಯಣ ವಿವರಿಸಿದ್ದಾರೆ.

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books