ಅಮರ ಪ್ರೇಮದ ಮಧು

Author : ಹೆಚ್.ಜಿ. ರಾಧಾದೇವಿ

Pages 167

₹ 25.00




Year of Publication: 1999
Published by: ಹೇಮಂತ ಸಾಹಿತ್ಯ
Address: 972-ಸಿ, 4ನೇ ಇ ವಿಭಾಗ, ರಾಜಾಜಿನಗರ, ಬೆಂಗಳೂರು- 560010

Synopsys

‘ಅಮರ ಪ್ರೇಮದ ಮಧು’ ಕಾದಂಬರಿಗಾರ್ತಿ ಹೆಚ್. ಜಿ. ರಾಧಾದೇವಿ ಅವರು ರಚಿಸಿರುವ ಸಾಮಾಜಿಕ ಕಾದಂಬರಿ. ಯುವತಿಯೊಬ್ಬಳ ನಿಸ್ವಾರ್ಥ ಪ್ರೇಮದ ಬಗ್ಗೆ ಭಾವುಕವಾಗಿ ವಿವರಿಸಿದ್ದಾರೆ.ವಿವಾಹಿತ ಶ್ರೀಮಂತನೋರ್ವನ ಬಾಳಿನಲ್ಲಿ ಅನಿವಾರ್ಯವಾಗಿ ಪ್ರವೇಶಿಸಿದ ಯುವತಿ ಅವನ ಶ್ರೀಮಂತಿಕೆ, ಪ್ರಣಯ ಪ್ರೇಮ ಯಾವುದೂ ಪಡೆಯದೇ ಜೀವನದುದ್ದಕ್ಕೂ ಏಕಾಂಗಿಯಾಗಿ ನಿಲ್ಲುತ್ತಾಳೆ, ಆದರೆ ಆ ಕುಟುಂಬಕ್ಕೆ ನೂರು ಬಗೆ ಉಪಕಾರ ಮಾಡಿ,ಅವನ ಪಾಲಿನ ಅಮರ ಪ್ರೇಮದ ಮಧುವಾಗುತ್ತಾಳೆ.

About the Author

ಹೆಚ್.ಜಿ. ರಾಧಾದೇವಿ - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books