ಪುಟ್ರಾಮನ ಪರ್ಪಂಚ

Author : ವೆಂಕಟ್ರಮಣ ಬೆಳಗೆರೆ

Pages 112

₹ 115.00
Year of Publication: 2022
Published by: ಅನನ್ಯ ಪುಸ್ತಕಗಳು
Address: #348/1, ಎ ರಾಮಣ್ಣ ರೋಡ್, ಕೃಷ್ಣವಿಲಾಸ ಅಗ್ರಹಾರ, ದೇವರಾಜ ಮೋಹಲ್ಲಾ- 570024

Synopsys

‘ಪುಟ್ರಾಮನ ಪರ್ಪಂಚ’ ಕೃತಿಯು ಬಯಕೆ ಬವಣೆಗಳ ಅನಾವರಣವಾಗಿದೆ. ಕಾದಂಬರಿಯ ಆರಂಭಕ್ಕೇ ಸ್ಥಳಾವರಣದ ಪರಿಚಯ ಇಲ್ಲಿ ವಿಶೇಷವಾಗಿ ಮೂಡಿಬಂದಿದೆ. ಬೆಳಗೆರೆ ಎಂಬ ಊರಿನ ಸಕಲೆಂಟು ಜಾತಿಯ ಜನಗಳ ನೆಲೆಗಳು, ಆಧುನಿಕತೆ ಎಂಬುದು ಆ ಊರಿಗೆ ಬರುತ್ತಿದ್ದ ಗೊಮ್ಮಟೇಶ, ಸಿದ್ರಾಮೇಶ್ವರ, ತಿಪ್ಪೇಸ್ವಾಮಿ ಎಂಬ ಬಸ್ಸುಗಳಲ್ಲದೇ ಒಂದೇ ಒಂದು ಸರ್ಕಾರಿ ಬಸ್ಸಿನ ಮೂಲಕ ಆಗಾಗ ಇಣುಕಿ ಹೋಗುತ್ತಿದ್ದ ಬಗೆಯನ್ನು ಹೇಳುವಲ್ಲಿ ಆ ಪ್ರದೇಶದ ಸ್ಥಿತಿ-ಗತಿಗಳಿಗೆ ಕಾರಣಾದಿಗಳನ್ನೂ ಕಟ್ಟಿಕೊಡುವ ರೀತಿಯಲ್ಲಿ ಈ ಕೃತಿಯು ಸಾರ್ಥಕಗೊಂಡಿದೆ

About the Author

ವೆಂಕಟ್ರಮಣ ಬೆಳಗೆರೆ

ವೆಂಕಟ್ರಮಣ ಬೆಳಗೆರೆ ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಬೆಳಗೆರೆ ಗ್ರಾಮದವರು. ಹೆಗ್ಗೋಡಿನ ನೀನಾಸಂ ಸಂಸ್ಥೆಯಲ್ಲಿ ನಾಟಕ ತರಬೇತಿ ಪಡೆದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ. ಎ ಪದವಿ ಪೂರ್ಣಗೊಳಿಸಿದ್ದಾರೆ. ಬೆಳಗೆರೆ ಕೃಷ್ಣಶಾಸ್ತ್ರಿಗಳ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿ, ನಂತರ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕನಾಗಿ ಆಯ್ಕೆಯಾದ ನಂತರ ದಾವಣಗೆರೆಯಲ್ಲಿ ಎಂಟು ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ್ತ ಮೈಸೂರಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತಿದ್ದಾರೆ. ಕೃತಿಗಳು: ಪುಟ್ರಾಮನ ಪರ್ಪಂಚ ...

READ MORE

Related Books