ಒಲುಮೆಯ ಹೂವು, ಪುಷ್ಪತಲ್ಪದ ಮಧ್ಯೆ ಮತ್ತು ಮನ ಒಲಿದ ಆಯ್ಕೆ

Author : ಹೆಚ್.ಜಿ. ರಾಧಾದೇವಿ

Pages 262

₹ 240.00
Year of Publication: 2020
Published by: ಹೇಮಂತ ಸಾಹಿತ್ಯ ಪ್ರಕಾಶನ
Address: 972 ಸಿ, 62ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, 63ನೇ ಕ್ರಾಸ್ ರೋಡ್, 4ನೇ ಎಂ ಬ್ಲಾಕ್, ಮಂಜುನಾಥ್ ನಗರ, ರಾಜಾಜಿನಗರ, ಬೆಂಗಳೂರು, ಕರ್ನಾಟಕ, 560010,
Phone: 9448064619

Synopsys

ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ‘ಒಲುಮೆಯ ಹೂವು, ಪುಷ್ಪತಲ್ಪದ ಮಧ್ಯೆ ಮತ್ತು ಮನ ಒಲಿದ ಆಯ್ಕೆ’.

ಈ ಕಾದಂಬರಿಯಲ್ಲಿ ಲೇಖಕಿ ಟಿವಿ ಮಾಧ್ಯಮದಿಂದ ನಲುಗಿದ ಗ್ರಂಥಾಲಯಗಳು ಹಾಗು ಅವುಗಳ ಪುನರುಥ್ಥಾನಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ . ಟಿವಿ ಬಂದ ನಂತರ ಸರ್ಕ್ಯುಲೇಟಿಂಗ್ ಲೈಬ್ರರಿಗಳು ಒಂದೊಂದಾಗಿ ಕಣ್ಣು ಮುಚ್ಚಿದ್ದು ನಿಜ , ಇದರಿಂದ ಪುಸ್ತಕೋದ್ಯಮದ ಮೇಲೆ ಹೊಡೆತ ಬಿದ್ದಿದ್ದೂ ಅಷ್ಟೇ ನಿಜ . ಸರ್ಕ್ಯುಲೇಟಿಂಗ್ ಲೈಬ್ರರಿಗಳ ಮುಖ್ಯ ಗ್ರಾಹಕರಾಗಿದ್ದ ಮಹಿಳೆಯರು ದೂರದರ್ಶನದ ಕಡೆಗೆ ವಾಲಿದ್ದೇ ಇದಕ್ಕೆ ಕಾರಣ . ದೃಶ್ಯ ಮಾಧ್ಯಮದ ಆಕರ್ಷಣೆಯ ಜೊತೆಗೆ ಮನೆಯಲ್ಲೇ ದೊರಕುವ ಮನರಂಜನೆ ಮಹಿಳೆಯರ ಮನ ಸೆಳೆದಿತ್ತು ಎನ್ನುತ್ತಾರೆ ಲೇಖಕಿ . ನೂರೆಂಟು ಮನೆಗೆಲಸಗಳ ನಡುವೆ ದೂರ ಲೈಬ್ರರಿಯವರೆಗೂ ಹೋಗಿ ಪುಸ್ತಕ ಹುಡುಕುವ ಜಂಜಾಟಕ್ಕಿಂತಲೂ ಮನೆಯಲ್ಲೇ ಸಿಗುವ ಮನರಂಜನೆಯನ್ನು ಮಹಿಳೆಯರು ಸುಲಭವಾಗಿ ಒಪ್ಪಿಕೊಂಡರು ಎನ್ನುತ್ತಾರೆ ಲೇಖಕಿ . ಇದಕ್ಕೆ ಪರಿಹಾರವೇನು ? ಕಥಾ ನಾಯಕಿ ರಂಜಿತಾಳ ಮುಖಾಂತರ ಲೇಖಕಿ ಇದಕ್ಕೆ ಉತ್ತರವನ್ನೂ ಸೂಚಿಸುತ್ತಾರೆ .

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books