ಕತ್ತಲ ದಾರಿ ದೂರ

Author : ದ್ವಾರನಕುಂಟೆ ಪಾತಣ್ಣ

Pages 224

₹ 200.00
Year of Publication: 2022
Published by: ಸ್ನೇಹ ಪ್ರಕಾಶನ
Phone: 9449655053

Synopsys

ಲೇಖಕ ದ್ವಾರನಕುಂಟೆ ಪಾತಣ್ಣ ಅವರ ಕದಂಬರಿ ಕತ್ತಲ ದಾರಿ ದೂರ. ಕಾಡಿನ ಕಥೆಯೊಂದು ದೀರ್ಘಕಾಲದ ನಂತರ ಅಕ್ಷರ ರೂಪ ತಾಳಿದೆ. ಎರಡು ಭಿನ್ನ ಪಾತ್ರಗಳ ಮೂಲಕ ನಿರೂಪಿಸಲು ಹೊರಟ ಕಥೆಗಾರ ದ್ವಾರನಕುಂಟೆ ಅವರಿಗೆ ಕೊನೆಗೆ ಕೊನೆಗೆ ಪ್ರೊಫೆಸರ್ ರಾಘವ ಪಾತ್ರವೇ ಮಹತ್ವದೆನ್ನಿಸಿತು. ಅದರ ಮೂಲಕವೇ ಸಮಾಜದ ಹುಳುಕು, ಆಸೆಬುರುಕುತನ, ನೈತಿಕತೆಯ ಪತನವನ್ನು ತೋರಿಸಿದ್ದಾರೆ. ಈ ವೇಳೆ ಪ್ರೊಫೆಸರರನ್ನು ಸಮಾಜ ನಡೆಸಿಕೊಳ್ಳುವ ರೀತಿಯನ್ನೂ ಅವರು ವಿಷಾದದಿಂದಲೇ ಚಿತ್ರಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ಯ್ರದ ಕುರಿತ ಚರ್ಚೆಯೂ ಕಥೆಯೊಳಗೆ ಸಾವಯವವಾಗಿ ಬೆರೆತಿದ್ದು, ಕಾದಂಬರಿ ವರ್ತಮಾನದ ವಿದ್ಯಮಾನಕ್ಕೂ ಸ್ಪಂದಿಸಿದೆ. ವಿಷಯದ ಗಹನತೆ, ಮನರಂಜನೆ ಎರಡೂ ದಿಕ್ಕಿನಲ್ಲಿ ಓದಿಸಿಕೊಂಡು ಹೋಗುವ ಕೃತಿ.

About the Author

ದ್ವಾರನಕುಂಟೆ ಪಾತಣ್ಣ

ದ್ವಾರನಕುಂಟೆ ಪಾತಣ್ಣ ಅವರು 1951 ಮಾರ್ಚ್ 14 ರಂದು  ತುಮಕೂರು ಜಿಲ್ಲೆಯ ದ್ವಾರನಕುಂಟೆಯಲ್ಲಿ ಜನಿಸಿದರು. ಬಿ.ಎಸ್. ಸಿ, ಡಿ.ಎಂ.ಇ ಪದವೀಧರರಾದ ಇವರು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ಸದಸ್ಯರಾಗಿ, ಸ್ವಾಭಿಮಾನಿ ಕರ್ನಾಟಕ ಕ್ಷೇತ್ರದ ರಾಜ್ಯಾಧ್ಯಕ್ಷರಾಗಿ, ಕನ್ನಡ ಸಂಘರ್ಷ ಸಮಿತಿಯ ಉಪಾಧ್ಯಕ್ಷರಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ. 18 ಕೃತಿಗಳನ್ನು ರಚಿಸಿ ಅಕ್ಷರ ಲೋಕಕ್ಕೆ ಅರ್ಪಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ಧಾರೆ. ಇವರ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀಮತಿ ಪದ್ಮಾವತಮ್ಮ ದತ್ತಿ  ಪ್ರಶಸ್ತಿ, ...

READ MORE

Related Books