ಹೊಸ ಹಾದಿಯಲ್ಲಿ

Author : ಎನ್. ಭಾಸ್ಕರ ಆಚಾರ್ಯ

Pages 160

₹ 150.00




Year of Publication: 2021
Published by: ಎನ್.ಆರ್. ಎ.ಎಮ್.ಎಚ್. ಪ್ರಕಾಶನ
Address: ಕೋಟೇಶ್ವರ -576222

Synopsys

ಎನ್ ಭಾಸ್ಕರ ಆಚಾರ್ಯ ಅವರ ಸಾಮಾಜಿಕ ಕಾದಂಬರಿ ‘ಹೊಸ ಹಾದಿಯಲ್ಲಿ’. ಅಭ್ಯಾಸ, ಪ್ರಯೋಗ, ಪರಿಣಾಮ ಭಾಗ: ಎರಡು ಎಂಬ ಉಪಶೀರ್ಷಿಕೆಯನ್ನುಈ ಕೃತಿ ಹೊಂದಿದೆ. 1996ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2021ರಲ್ಲಿ ಎರಡನೇ ಮುದ್ರಣ ಕಂಡಿದೆ. ಈ ಕಾದಂಬರಿಗೆ ಪಿ. ಸೂರ್ಯನಾರಾಯಣ ಚಡಗ ಅವರು ಬೆನ್ನುಡಿ ಬರೆದಿದ್ದಾರೆ. ಆರ್ಟಿ ಎಂಬ ಕಾವ್ಯನಾಮದಿಂದ ಈಗಾಗಲೇ ಖ್ಯಾತರಾದ ಶ್ರೀ ಡಾ| ಎನ್. ಭಾಸ್ಕರ ಆಚಾರ್ಯರ ಈ ಕಾದಂಬರಿ ವೈಶಿಷ್ಟ್ಯಪೂರ್ಣವಾಗಿದ್ದು, ಅವರ ಮಿಕ್ಕ ಕಾದಂಬರಿಗಳಿಗಿಂತ "ಹೊಸ ಹಾದಿಯಲ್ಲಿ" ಮುನ್ನಡೆದಿದೆ. ಅಲ್ಲದೇ ಸಾಹಿತ್ಯ ಕೃಷಿಯಲ್ಲಿ ಅನುಭವದ ಫಸಲು ಹಸನಾಗಿರುವುದನ್ನು ಓದುಗರು ಕಾಣಬಹುದು. ಸಮಾಜದಲ್ಲಿರುವ ಗಣ್ಯರ, ವಿದ್ಯಾವಂತರ, ಧಾರ್ಮಿಕ, ರಾಜಕೀಯ, ರಾಜಕೀಯ ವ್ಯಕ್ತಿಗಳ ಇಬ್ಬಗೆಯ ನೀತಿ ಸ್ವಭಾವಗಳ ನೈಜ ಚಿತ್ರಣವನ್ನು ಎಳೆ ಎಳೆಯಾಗಿ ತೋರಿಸಿ ನಿರೂಪಿಸುವಲ್ಲಿ ಅಸಹಜತೆ ಕಾಣುವುದಿಲ್ಲ, ಪ್ರಚಲಿತ ನಮ್ಮ ದೇಶದ ವಿದ್ಯಾವಂತರ, ರಾಜಕೀಯ ಪುಡಾರಿಗಳ, ಮುಖಂಡರ ಬದುಕಿನ ಒಳನೋಟವನ್ನು ಇದರಿಂದಾಗಿ ಜನ ಜೀವನದ ಮೇಲೆ ಬೀರುವ ಪರಿಣಾಮಗಳ ತುಮುಲ, ವೈಖರಿಗಳನ್ನು ಕಾದಂಬರಿಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಕಾದಂಬರಿಯಲ್ಲಿ ಬರುವ ವ್ಯಕ್ತಿಚಿತ್ರಣ ಇಂದು ಸಮಾಜದಲ್ಲಿರುವ ಮುಖಂಡರ, ಪ್ರತಿಷ್ಠಿತ ವ್ಯಕ್ತಿಗಳ ಕುರಿತಾಗಿ ಬರೆದಂತೆ ಓದುಗರಲ್ಲಿ ಭಾಸವಾಗುವ ರೀತಿ ಚಿತ್ರಿತವಾಗಿದೆ. 'ಆರ್ಚಿ'ಯವರ ಬರವಣಿಗೆಯಲ್ಲಿ ಕಡಲ ತೀರದ ಜನಜೀವನ, ಆಡು ಭಾಷೆಗಳ ಪ್ರಭಾವ ಬೀರಿರುವುದನ್ನು ಕಾಣಬಹುದು. ಈ ಸಹಜತೆ ಕಾದಂಬರಿಗೆ ಮಿರುಗು ಕೊಟ್ಟಿದೆ. ಈ ಕಾದಂಬರಿ ಜನಮನ ರಂಜಿಸುವುದಲ್ಲದೆ ಇವರಿಂದ ಇನ್ನೂ ವಿನೂತನ ಕಾದಂಬರಿಗಳು ಮೂಡಿ ಬರಲಿ ಎಂದು ಹಾರೈಸೋಣ’ ಎಂದಿದ್ದಾರೆ.

About the Author

ಎನ್. ಭಾಸ್ಕರ ಆಚಾರ್ಯ
(01 February 1954)

ಭಾಸ್ಕರ್ ಆಚಾರ್ಯ ಎನ್ ಅವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ 1954 ಫೆಬ್ರವರಿ 01ರಂದು ಜನಿಸಿದರು. ಆರ್ಚಿ ಅವರ ಕಾವ್ಯನಾಮ. ತಂದೆಯ ಸ್ಮರಣಾರ್ಥ ಡಾ. ಎನ್. ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆಯನ್ನು 1983ರಲ್ಲಿ ನಿರ್ಮಿಸಿದ್ದಾರೆ.  ಕೋಟೇಶ್ವರ ರೋಟರಿ ಸಂಸ್ಥೆಯ ಪ್ರಾರಂಭಿಕ ಸದಸ್ಯರಾಗಿದ್ದರು. ಸುವರ್ಣ ಮಹೋತ್ಸವ ಸಮಿತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ಗೌರವಾಧ್ಯಕ್ಷ ಹಾಗೂ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದರು. ‘ದ್ವಂದ್ವ, ವ್ಯವಸ್ಥೆ, ಅಭ್ಯಾಸ, ಪ್ರಯೋಗ, ಪರಿಣಾಮ, ಹೊಸ ಹಾದಿಯಲ್ಲಿ, ಆರ್ಚಿ ಅಂಕಣ’ ಅವರ ಮುಖ್ಯ ಕೃತಿಗಳು. ಪ್ರತಿ ವರ್ಷ ಬೆಂಗಳೂರಿನ ಗೆಳೆಯರ ಬಳಗದ ಸಹಯೋಗದೊಡನೆ ಸಾಹಿತ್ಯಕ ಸ್ಪರ್ಧೆ, ...

READ MORE

Related Books