ಕರಾಳ ನೆನಪುಗಳು

Author : ರಾಮಕೃಷ್ಣ. ಎನ್

Pages 138

₹ 150.00
Year of Publication: 2022
Published by: ಶೋಭಾ ಎಂಟರ್‌ಪ್ರೈಸಸ್‌
Address: ನಂ. 77,12ನೇ ಮುಖ್ಯ ರಸ್ತೆ,5ನೇ ಅಡ್ಡ ರಸ್ತೆ, ರಾಘವೇಂದ್ರ ಬ್ಲಾಕ್‌ ಬೆಂಗಳೂರು- 560050
Phone: 6361370460

Synopsys

‘ಕರಾಳ ನೆನಪುಗಳು’ ರಾಮಕೃಷ್ಣ ಎನ್‌ ಅವರ ಕಾದಂಬರಿಯಾಗಿದೆ. ನಾನು ಕಣ್ಣುಮುಚ್ಚಿದ್ದು ನಿದ್ರಾದೇವಿಯ ಪ್ರಾರ್ಥಿಸುತ್ತ ಜಗವೇಲ್ಲಾ ಮರೆತು ಅವಳಲ್ಲಿ ತಲ್ಲಿನನಾಗಲು. “ಆದರೆ ನನ್ನ ಮನಸ್ಸು ಮತ್ತು ಅಲೋಚನೆಗಳು ಮಾತ್ರ ಮಧ್ಯಾಹ್ನ ಶಂಕ್ರಪ್ಪ ರವರು ಹೇಳಿದ ಮಾತುಗಳತ್ತ ಸೇಳೆಯುತ್ತಿತ್ತು!” ಬೇಸರವಾಗಿ ಕಣ್ಣು ತೆರೆದೆ; ನನ್ನ ಪಕ್ಕದಲ್ಲಿದ್ದ ಗೋಡೆಯತ್ತ ತಿರುಗಿದೆ. ಗಡಿಯಾರದಲ್ಲಿ ಹತ್ತುವರೆಯಾಗಿತ್ತು. ಇಂದು ಅತಿ ಹೆಚ್ಚಿಗೆ ಕೆಲಸವಿತ್ತು. ಇಷ್ಟು ದಿನಕ್ಕು ಇವತ್ತಿಗು ತುಂಬ ಹೆಚ್ಚಿಗೆ ಸೀಮೆಂಟು ಕಲಸಿದ್ದೆ. ಅದರ ಮೈಕೈ ನೋವು ಯಾರಿಗೆ ಹೇಳಿದರೆ ಏನು ಪ್ರಯೋಜನ. ಮಲಗಿದ್ದರೆ ಎಲ್ಲಾ ಸುಗಮವಾಗುತ್ತಿತ್ತು. ಆದರೆ ನಿದ್ರಾದೇವಿ ನನಗೆ ಒಲಿಯಲು ಮುನುಸಾಗಿರಬೇಕೇನೊ? ಕೈ ಮೀರಿ ಪ್ರಯತ್ನಿಸಿದರು ಪ್ರತಿಪಲವೇನು ಸಿಗಲಿಲ್ಲ. ಮತ್ತೊಂದು ಕಡೆ; ಬೆಳಿಗ್ಗೆ ಕೆಲಸವಿದೆ ಎಂದು ನನ್ನ ತಲೆ ಹಾಗಾಗ ಎಚ್ಚರಿಸುತ್ತಿತ್ತು! ನಾನು ಇದ್ದ ಮನೆ ನಮ್ಮ ಸ್ವತ ಮನೆಯಲ್ಲ. ಬೇರೆಯ ಊರು. ಬೇರೆಯವರ ಮನೆ. ನಾನು ಮನೆ ಕಟ್ಟುವ ಬೆಲ್ದಾರರಿಗೆ ಸಪ್ಲಯರಾಗಿದ್ದೆ. ನಾಳೆಯೂ ಕೆಲಸವಿದೆ.' ಈಗೇನಾದರು ನಿದ್ದೆ ಮಾಡದಿದ್ದರೆ?; ಕೆಲಸದಲ್ಲಿದ್ದಾಗ ನಿದ್ದೆಯ ಸೇಳೆತಕ್ಕೆ ಆಕಳಿಕೆ ಬಂದಾಗ ಗಮನ ಅಷ್ಟೇನು ಸರಿ ಇರುವುದಿಲ್ಲ. ನಿದ್ದೆಯ ಮಂಪರು ಇದ್ದಾಗ ಎಂತಹ ಕೆಲಸವಾದರು ಕೆಡುತ್ತದೆ! ಕಣ್ಣು ತನ್ನ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. (ಆಯ್ದ ಭಾಗ)

About the Author

ರಾಮಕೃಷ್ಣ. ಎನ್

ರಾಮಕೃಷ್ಣ. ಎನ್ ಅವರು ದೊಡ್ಡನರಸಾಯ್ಯನಪಾಳ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿಯವರು. ಕೃತಿಗಳು: ಕರಾಳ ನೆನಪುಗಳು ...

READ MORE

Related Books