ಚಾರಿತ್ರಮೇರು ಅತ್ತಿಮಬ್ಬೆ

Author : ಬಾಳಾಸಾಹೇಬ ಲೋಕಾಪುರ

Pages 160

₹ 160.00




Published by: ಅನುಪಮ ಪ್ರಕಾಶನ
Address: ಅಥಣಿ, ಸಾವಿತ್ರಿ ಸಾಧನ್, ಸತ್ಯಪ್ರಮೋದ್ ನಗರ, ಬೆಳಗಾವಿ ಜಿಲ್ಲೆ, ಅಥಣಿ - 591304\n
Phone: 9449625025

Synopsys

ಇದು ಅತ್ತಿಮಬ್ಬೆ, ರನ್ನ ಮತ್ತು ಚಾವುಂಡರಾಯರ ಜೀವನವನ್ನು ಕುರಿತಾದ ವಿಶಿಷ್ಟ ಕಾದಂಬರಿ. ಈ ಕಾದಂಬರಿ ಕರ್ನಾಟಕದ ಉಜ್ವಲ ಚರಿತ್ರೆಯ ಸುವರ್ಣ ಅಧ್ಯಾಯವೊಂದನ್ನು ಸಜೀವವಾಗಿಸಿದೆ. ಈ ಕಾದಂಬರಿಯಲ್ಲಿ ಮೂರು ಅಧ್ಯಾಯಗಳಿದ್ದು, ಅತ್ತಿಮಬ್ಬೆ, ರನ್ನ ಮತ್ತು ಚಾವುಂಡರಾಯರ ವ್ಯಕ್ತಿತ್ವವು ವಿಕಾಸವಾದ ಬಗೆಯನ್ನು ಸವಿವರವಾಗಿ ಚಿತ್ರಿಸಲಾಗಿದೆ. ರಾಜಕೀಯ, ಆಡಳಿತ, ರಾಜರ ಕ್ರೌರ್ಯ, ಯುದ್ಧಗಳು, ಶಾಸ್ತçಗಳು, ಜಾತಿ, ಮತ, ನಿಸರ್ಗ, ನಮ್ಮ ಪೂರ್ವಿಕರು ಬದುಕಿದ ಬಗೆ ‘ಚಾರಿತ್ರಮೇರು ಅತ್ತಿಮಬ್ಬೆ’ ಕಾದಂಬರಿ ಚಿತ್ರಿಸುತ್ತದೆ.

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books