ರೌದ್ರಾವರಣಂ

Author : ಅನಂತ ಕುಣಿಗಲ್

Pages 160

₹ 150.00




Year of Publication: 2022
Published by: ಅವ್ವ ಪುಸ್ತಕಾಲಯ
Address: ಕೆಂಚನಹಳ್ಳಿ
Phone: 8548948660

Synopsys

‘ರೌದ್ರಾವರಣಂ’ ಕೃತಿಯು ಅನಂತ ಕುಣಿಗಲ್ ಅವರ ಕಾದಂಬರಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಜೋಗಿ ಅವರು, ಕಾಡು ಬೇಟೆ, ಹುಡುಕಾಟ, ಕೆಡುಕು, ಸಜ್ಜನಿಕೆ, ಪ್ರೇಮದ ಆಖ್ಯಾನಗಳಿಗಿರುವ ಈ ಕಾದಂಬರಿಯನ್ನು ಓದಿ ಖುಷಿಯಾಯಿತು. ನನ್ನ ಹದಿಹರೆಯದಲ್ಲಿ ಇಂಥ ಕಾದಂಬರಿಗಳನ್ನು ಹುಡುಕಿ ಓದುತ್ತಿದ್ದೆ. ಇವು ಆಗಷ್ಟೇ ಓದಿನತ್ತ ಹೊರಳುತ್ತಿರುವ ತಾರುಣ್ಯಪೂರ್ಣ ಮನಸ್ಸುಗಳಿಗೆ ಅವಶ್ಯಕ ಕೂಡ. ಕನ್ನಡದಲ್ಲಿ ನವ್ಯಪಂಥದ ನಂತರ ಸಾಹಿತ್ಯ ಕ್ಷೇತ್ರ ಇಂಥ ಯಂಗ್ ಅಡಲ್ಟ್ ಫಿಕ್ಷನ್ ಕತೆಗಳನ್ನು ನಿರ್ಲಕ್ಷ್ಯದಿಂದ ಕಾಣತೊಡಗಿತು. ವೈಚಾರಿಕತೆ ಬೇಕು. ಆದರೆ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಅಪ್ಪಟವಾದ ಮನರಂಜನೆಯೂ ಬೇಕಾಗುತ್ತದೆ. ಅದರಲ್ಲೂ ಒಂದು ವಯಸ್ಸಿನಲ್ಲಿ ಮನಸ್ಸು ಕಲ್ಪನಾ ಜಗತ್ತಿನಲ್ಲಿ ವಿಹರಿಸಲು ಇಚ್ಚಿಸುತ್ತದೆ. ಅಂಥವರನ್ನು ಓದಿನತ್ತ ಕರೆದು ತರಲು ಈ ರೀತಿಯ ಕುತೂಹಲಕಾರಿ ಕತೆಗಳು ಅವಶ್ಯ. ಈ ಕಾದಂಬರಿಯ ಬಾಬಣ್ಣ, ಅಗಸ್ತ್ಯ, ಪುಷ್ಪಾ, ಮೇಸ್ಟ್ರು, ಚಂದ್ರ, ಶಿಕಾರಿ, ಪೊಲೀಸರ ನಡುವಿನ ಮುಖಾಮುಖಿ -ಎಲ್ಲವೂ ಮುಂದೇನಾಗುತ್ತದೆ ಎಂಬ ಕುತೂಹಲವನ್ನು ಹೆಚ್ಚಿಸುತ್ತಲೇ ಸಾಗುತ್ತದೆ. ಇದನ್ನು ಓದುತ್ತಾ ನಾನು ನನ್ನ ಬಾಲ್ಯಕ್ಕೆ ಮರಳಿದೆ. ಕಳೆದುಹೋದ ದಿನಗಳನ್ನು ಮರಳಿಸುವ ಪುಸ್ತಕಗಳ ಮೇಲೆ ನನಗೆ ಪ್ರೀತಿ ಎಂದಿದ್ದಾರೆ.

About the Author

ಅನಂತ ಕುಣಿಗಲ್
(20 December 1997)

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ...

READ MORE

Related Books