ಉಧೋ ಉಧೋ

Author : ಬಾಳಾಸಾಹೇಬ ಲೋಕಾಪುರ

Pages 90

₹ 143.00




Year of Publication: 2008
Published by: ಮನೋಹರ ಗ್ರಂಥ ಮಾಲಾ
Address: ಮನೋಹರ ಗ್ರಂಥಮಾಲಾ, ಲಕ್ಷ್ಮೀ ಭವನ, ಸುಭಾಸ ರಸ್ತೆ, ಧಾರವಾಡ-580001
Phone: 8362441822

Synopsys

ʼಉಧೋ ಉಧೋʼ ಕಾದಂಬರಿಯನ್ನು ಬಾಳಾಸಾಹೇಬ ಲೋಕಾಪುರ ಅವರು ರಚಿಸಿದ್ದಾರೆ.ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಗದ್ದಲ, ಜಯಕಾರದ ಮಿಶ್ರಣದ ಕಥೆಯನ್ನು ಒಳಗೊಂಡಿದೆ. ವ್ಯಕ್ತಿಯೊಬ್ಬ ತನ್ನೊಳಗೆ ತನ್ನ ಸುತ್ತಲಿನ ಸಮಾಜವನ್ನು ಅನುಭವಿಸುವ ರೀತಿ ಮತ್ತು ಆತ ಸಮಾಜವನ್ನು ಸರಳಗೊಳಿಸುವ ಸಂಗತಿ ವ್ಯಕ್ತಿ ನಿರ್ಮಿತ ಸಮಷ್ಟಿಯೇ ಆಗಿರುತ್ತದೆ ಎಂಬುದು ಈ ಕಾದಂಬರಿಯಲ್ಲಿ ಬಣ್ಣಿಸಲಾಗಿದೆ. ಊರಿಗಿರುವ ಒಂದೇ ಬಾವಿಯ ನೀರಿಗಾಗಿ ಹೊಲೆಯರ ಮತ್ತು ಮೇಲ್ಜಾತಿಯವರ ನಡುವೆ ನಡೆಯುವ ಒಂದು ಪ್ರಹಸನದಂಥ ಸಂಘರ್ಷ ಮತ್ತು ಅದಕ್ಕೆ ಕಾರಣವಾದ ಕೆಲವು ಕ್ಷುಲ್ಲಕ ಘಟನೆಗಳು, ಅದರ ಫಲಶ್ರುತಿ ಎನ್ನಬಹುದಾದ ಇನ್ನು ಕೆಲವು ಘಟನೆಗಳು ಹಲವಾರು ಗಹನವಾದ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತವೆ. ಈ ಕಾದಂಬರಿಯಲ್ಲಿ ಬಳಸಿದ ಭಾಷೆ, ನುಡಿಕಟ್ಟು ಕಟ್ಟಿಕೊಡುವ ಚಿತ್ರಗಳು ಈ ಕಾದಂಬರಿಯ ಓದು ಆಪ್ತವಾಗಿಸಲು, ಓದುಗನನ್ನು ತನ್ನೊಂದಿಗೆ ಸೆಳೆದೊಯ್ಯಲು ಸಹಕರಿಸುತ್ತದೆ.

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books