ನಿಲುವಂಗಿಯ ಕನಸು

Author : ಹಾಡ್ಲಹಳ್ಳಿ ನಾಗರಾಜ್

Pages 136

₹ 120.00




Year of Publication: 2019
Published by: ಹಾಡ್ಲಹಳ್ಳಿ ಪಬ್ಲಿಕೇಷನ್ಸ್
Address: ಆರ್.ಸಿ. ರಸ್ತೆ, ಹಾಸನ- 573201
Phone: 8747043485

Synopsys

‘ನಿಲುವಂಗಿಯ ಕನಸು’ ಹಾಡ್ಲಹಳ್ಳಿ ನಾಗರಾಜ್ ಅವರ ಕಾದಂಬರಿ. ಈ ಕೃತಿಗೆ ಡಾ. ಗುರುಪಾದಪ್ಪ ಮರಿಗುದ್ದಿ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಹಾಡ್ಲಹಳ್ಳಿ ನಾಗರಾಜು ಅವರು ಮಲೆನಾಡ ಕೃಷಿ ಮತ್ತು ಕೃಷಿಕರನ್ನು ಚೆನ್ನಾಗಿ ತಿಳಿದವರು. ಸ್ವತಃ ಪ್ರಯೋಗಶೀಲರಾಗಿ ಕೃಷಿ ಕೈಗೊಂಡು ಅದರ ಕಷ್ಟ-ನಷ್ಟ ಕಂಡವರು. ಅವರ ಸೃಜನಶೀಲ ಶಕ್ತಿ, ವಾಸ್ತವ ಅನುಭವ ಮತ್ತು ಗಾಢವಾದ ಚಿಂತನೆಗಳ ಮೂಲಕ ಹೊರಬಂದಿರುವ ನಿಲುವಂಗಿಯ ಕನಸು ಮಲೆನಾಡಿನ ಗ್ರಾಮ ಜಗತ್ತಿನ ಬೆಳಕಿಂಡಿಯಾಗಿರುವಂತೆ ಕರ್ನಾಟಕದ, ಭಾರತದ ಕೃಷಿ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತದೆ. ಕೃಷಿಕರು ಸಮಸ್ಯೆಗಳ ದೊಡ್ಡ ಸುಳಿಗೆ ಸಿಲುಕಿದ್ದಾರೆ ಎಂಬುದನ್ನು ಎಚ್ಚರಿಸುವ ಕಾದಂಬರಿ ಹಲವು ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ ಎಂದಿದ್ದಾರೆ.

ಜೊತೆಗೆ ಈ ಕಾದಂಬರಿಯನ್ನು ಕಥನ ಕುತೂಹಲಕ್ಕೆ, ಸಾಹಿತ್ಯ ಕೃತಿಯಾಗಿ, ಕಲಾತ್ಮಕವೆಂದು ಓದಬಹುದು. ಆದರೆ ಅದನ್ನು ಮೀರಿದ ತತ್ವಜ್ಞಾನ, ಆಶಯಗಳಿಂದ ಅದು ನಮಗೆ ಮುಖ್ಯವಾಗುತ್ತದೆ ಆದ್ದರಿಂದ ಸಾಮಾನ್ಯ ಓದುಗರಂತೆ, ಕೃಷಿಕರು, ರೈತನಾಯಕರು, ಸಂಘಟನೆಗಳು, ಇಲಾಖೆಗಳು, ಬೋರ್ಡುಗಳ ಜನರು ಓದಬೇಕು. ರೈತರ ಉದ್ದಾರಕ್ಕೆಂದು ತಲೆ ಎತ್ತಿರುವ ಅನೇಕ ಕೃಷಿ ವಿಶ್ವವಿದ್ಯಾಲಯಗಳು, ತೋಟಗಾರಿಕಾ, ಪಶುಪಾಲನಾ ವಿಶ್ವವಿದ್ಯಾಲಯ ಕಾಲೇಜು, ಕೇಂದ್ರಗಳು, ಕೃಷಿ ಸಂಶೋಧನಾ ಕೇಂದ್ರಗಳು ಇದನ್ನು ಒಂದು ಪಾಠ್ಯವಾಗಿಯೇ ಓದಬೇಕು ಎಂದು ಡಾ. ಗುರುಪಾದಪ್ಪ ಮರಿಗುದ್ದಿ ತಿಳಿಸಿದ್ದಾರೆ.

About the Author

ಹಾಡ್ಲಹಳ್ಳಿ ನಾಗರಾಜ್

ಹಾಡ್ಲಹಳ್ಳಿ ನಾಗರಾಜು ಅವರು ಮೂಲತಃ ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ ಗ್ರಾಮದವರು. ತಂದೆ- ಗುರುಶಾಂತೇಗೌಡರು, ತಾಯಿ- ಪುಟ್ಟಮ್ಮ. ಕಡುಬಡತನದ ರೈತಾಪಿ ಕುಟುಂಬದಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾಪತ್ರಕ್ಕೆ ಪಾತ್ರರಾಗಿದ್ದಾರೆ. ಎನ್.ಸಿ.ಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಂತರ ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಹಾಸನ ನಗರ ಸಮೀಪ ಅತ್ತಿಹಳ್ಳಿ ಎಂಬ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ ನಾಗರಾಜು ಅವರು ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪುಮೂಡಿಸಿದ್ದಾರೆ. ...

READ MORE

Related Books