ಮಾಯಾಜಿಂಕೆ

Author : ನಾಗರಾಜು ಜಿ.ಬಿ

Pages 236

₹ 250.00




Year of Publication: 2021
Published by: ದರ್ಪಣ ಇಪ್ರಿಂಟ್ ಆಫ್ ಪ್ರಿಸಮ್ ಪೈ. ಲಿಮಿಟೆಡ್
Address: #1865, 32ನೇ ಕ್ರಾಸ್, 10ನೇ ಮುಖ್ಯ ರಸ್ತೆ, ಬಿ.ಎಸ್.ಕೆ 2ನೇ ಹಂತ, ಬೆಂಗಳೂರು-560070

Synopsys

‘ಮಾಯಾಜಿಂಕೆ’ ಕೃತಿಯು ನಾಗರಾಜು ಜಿ.ಬಿ ಅವರ ಕಾದಂಬರಿ.  ಕೃತಿಯ ಕುರಿತು ಬರಗೂರು ರಾಮಚಂದ್ರಪ್ಪ ಅವರು ಬೆನ್ನುಡಿಯಲ್ಲಿ , ‘ಜಿ.ಬಿ ನಾಗರಾಜು ಅವರ ‘ಮಾಯಾಜಿಂಕೆ’ ಎಂಬ ಕಾದಂಬರಿಯು ಬದುಕಿನ ವಿವಿಧ ವ್ಯಾಖ್ಯಾನಾತ್ಮಕ ಹೇಳಿಕೆಗಳನ್ನು ದಾಖಲಿಸುತ್ತಲೇ ಅಮರತ್ವ ನೀಡುವುದೆಂದು ಹೇಳಲಾದ ಸಂಜೀವಿನಿ ಸಸ್ಯದ ಶೋಧಕ್ಕೆ ಹೊರಡುವ ತಿರುವಿನಿಂದ ಕುತೂಹಲ ಮೂಡಿಸುತ್ತದೆ. ಗ್ರಾಮೀಣ ಪಟ್ಟಣ ಹಾಗೂ ಕಾಡು ಹೀಗೆ ಯಾವುದೇ ಪ್ರದೇಶವಾಗಲಿ ನಾಗರಾಜು ಅವರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಚಿತ್ರಕ ಪ್ರತಿಭೆಯು ಅವರ ಒಂದು ಶಕ್ತಿಯಾಗಿದೆ. ಅದೇ ರೀತಿ ವಿವಿಧ ಪಾತ್ರಗಳ ವ್ಯಕ್ತಿತ್ವವನ್ನು ಮನಗತ ಮಾಡುವಂತೆ ವಿವರಗಳಲ್ಲಿ ಕಟ್ಟಿಕೊಡುವ ಕೌಶಲ್ಯವೂ ಇವರಿಗೆ ಕರಗತವಾಗಿದೆ. ಏನನ್ನೋ ಕೇಂದ್ರವಾಗಿಸಿಕೊಳ್ಳುತ್ತದೆಯೆಂಬ ಭಾವನೆ ಹುಟ್ಟಿಸುತ್ತ ಅದನ್ನು ಬಿಟ್ಟು ಬೇರೆ ದಿಕ್ಕಿನತ್ತ ಸಾಗುವ ಕಾದಂಬರಿಯು ಹೆಸರಿನಲ್ಲಷ್ಟೆ ಅಲ್ಲದೇ ಬದುಕಿನ ವ್ಯಾಖ್ಯಾನವೂ ಆಗುತ್ತದೆ. ಈ ಕಾದಂಬರಿಯನ್ನು ಕಟ್ಟುವ ಕಲಾಪ್ರತಿಭೆಯ ಫಲಿತವೂ ಆಗುತ್ತದೆ. ಈ ನೆಲೆಯಲ್ಲಿ ‘ಮಾಯಾಜಿಂಕೆ’ಯೆಂದು ಕಾದಂಬರಿಗೆ ಹೆಸರು ಕೊಟ್ಟಿರುವುದು  ಅರ್ಥಪೂರ್ಣವಾಗಿದೆ. ಜೊತೆಗೆ, ಚಿಂತನಾತ್ಮಕ ಚರ್ಚೆಯನ್ನು ಆಹ್ವಾನಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ನಾಗರಾಜು ಜಿ.ಬಿ

ನಾಗರಾಜು ಜಿ.ಬಿ ಅವರು ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಭೈರೇನಹಳ್ಲಿ ಗ್ರಾಮದವರು. ಇವರದ್ದು ರೈತ ಕುಟುಂಬ. ಅಪ್ಪಟ ಗ್ರಾಮೀಣ ಸೊಗಡಿನ ಹಿನ್ನೆಲೆಯವರು. ಕನ್ನಡದಲ್ಲಿ  ಪ್ರಾಥಮಿಕ ಶಿಕ್ಷಣ ಪೂರೈಸಿ, ಬಳ್ಳಾರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ, ಎಂ.ಬಿ.ಬಿ.ಎಸ್ ಪದವಿ ಪಡೆದರು. ಎಂ.ಎಸ್. ರಾಮಯ್ಯ ನಾರಾಯಣ ಹೃದಯಾಲಯದಲ್ಲಿ ಹೃದಯರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ಒಮಾನ್ ದೇಶದ ಮಸ್ಕತ್ ನಲ್ಲಿ ಹೃದಯರೋಗ ತಜ್ಞರಾಗಿದ್ದಾರೆ. ವೃತ್ತಿಯ ಜೊತೆಗೆ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು : ಬೆಂಬಿಡದ ಗುಂಗು, ಮಾಯಾಜಿಂಕೆ ...

READ MORE

Related Books