ಅಲ್ ಕೆಮಿಸ್ಟ್

Author : ಕಮಲಾ ಹೆಮ್ಮಿಗೆ

Pages 132

₹ 100.00
Year of Publication: 2018
Published by: ಸಂಕ್ರಮಣ ಪ್ರಕಾಶನ
Address: ಬೆಂಗಳೂರು-560078
Phone: 9446619709

Synopsys

ಪೌಲೋ ಕೊಯಿಲೊ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಕಾದಂಬರಿ ’ಅಲ್ ಕೆಮಿಸ್ಟ್’. ಮೂಲ ಸ್ಪಾನಿಷ್ ಭಾಷೆಯಿಂದ ಇಂಗ್ಲಿಷ್ ಸೇರಿದಂತೆ ವಿವಿಧ ಎಂಬತ್ತು ಭಾಷೆಗಳಿಗೆ ಅನುವಾದಗೊಂಡು ದಾಖಲೆ ಬರೆದಿರುವ ಪುಸ್ತಕ. ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಲೇಖಕಿ ಕಮಲಾ ಹೆಮ್ಮಿಗೆ.

'ಸ್ಯಾಂಟಿಯಾಗೋ' ಎನ್ನುವ ಕುರಿಗಾಹಿ ಕಾದಂಬರಿಯ ಕೇಂದ್ರ ಪಾತ್ರ. ಇಡೀ ಕಾದಂಬರಿ ಆಕ್ರಮಿಸಿಕೊಂಡಿರುವುದು ಇವನಿಂದಲೇ. 'ಅಲ್ ಕೆಮಿಸ್ಟ್' ಕಥಾಹಂದರ ಅತ್ಯಂತ ಸರಳ, ದಿನನಿತ್ಯದ ಸಾಮಾನ್ಯ ಘಟನೆ ಎಂಬಂತಿದ್ದರೂ, ಅಂತರ್ಮುಖಿಯಾಗಿ ಕ್ಷಣಕಾಲವಾದರೂ ಧ್ಯಾನಿಸಲು ಸಾಧ್ಯವಾಗುವುದಾದರೆ, ಅದು ’ಅನೂಹ್” ಎಂಬಂತೆ ಸರಳತೆಯನ್ನು ಮೀರಿ ಸಂಕೀರ್ಣತೆಯ ಅನುಭವವಾಗುತ್ತದೆ.

ಅಪ್ಪ ಅಮ್ಮನಿಗೆ ಸ್ಯಾಂಟಿಯಾಗೋ ಓರ್ವ ಪಾದ್ರಿಯಾಗಬೇಕು ಎನ್ನುವ ಇಚ್ಛೆ, ಪಾದ್ರಿಯಾಗಲು ಬೇಕಾದ ವಿದ್ಯೆ, ಆಚರಣೆಗಳನ್ನು, ಕಲಿಯುತಿರುವಂತೆಯೇ, ಅವನಿಗೆ ಭ್ರಮನಿರಸನವಾಗುತ್ತದೆ. ಕಲಿಯುವಾಗ ಲ್ಯಾಟಿನ್, ಸ್ಟಾನಿಷ್, ಅಧ್ಯಾತ್ಮ ಮುಖ್ಯ ವಿಷಯಗಳಾಗಿದ್ದರೂ, ಓದಿಗಿಂತ ಬದುಕು ಕುರಿತ ಆಸಕ್ತಿಯೇ ಮೇಲುಗೈ ಸಾಧಿಸಿರುತ್ತದೆ. ಅದಕ್ಕಾಗಿ ಅಪ್ಪನೊಂದಿಗೆ ವಾದ ಮಾಡಿ, ಕುರಿಗಾಹಿಯಾಗಿ ಕಲ್ಪನೆಯಲ್ಲಿ ಅದರ ಸುಖವನ್ನು ಅನುಭವಿಸತೊಡಗುತ್ತಾನೆ. ನಂತರ ಅಖಂಡ ನಿಧಿಯನ್ನು ಹುಡಕಲು ತನ್ನನ್ನು ಹಲವಾರು ಸತ್ವ ಪರೀಕ್ಷೆಗಳಿಗೆ ಒಡ್ಡಿಕೊಳ್ಳುವ ಅವನು ಸಾಕ್ಷಾತ್ಕರಿಸಿಕೊಂಡ ಬಗೆಯನ್ನು ತೆರೆದಿಡುತ್ತದೆ ಈ ಕಾದಂಬರಿ.

About the Author

ಕಮಲಾ ಹೆಮ್ಮಿಗೆ
(20 November 1952)

ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಅವರು ಹುಟ್ಟಿದ್ದು 20  ನವೆಂಬರ್, 1952ರಂದು, ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ. ಪ್ರತಿಭಾವಂತ ಬರಹಗಾರ್ತಿ. 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ.ಪದವಿಯನ್ನು ಪಡೆದವರು. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಪಡೆದಿದ್ದಾರೆ. ನನ್ನ ಸಂಗಾತಿ ಎಂದರೆ ಒಂಟಿತನ ಎನ್ನುವ ಕಮಲಾ ಹೆಮ್ಮಿಗೆ I Think i am addicted to it ಎನ್ನುತ್ತಾರೆ. ಅಡಿಗ, ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮೊದಲಾದವರ ಸಾಹಿತ್ಯಕ ಪ್ರಭಾವ ಇವರ ...

READ MORE

Related Books