ಯಮದೂತರು

Author : ಸುದರ್ಶನ ದೇಸಾಯಿ

Pages 188

₹ 30.00




Year of Publication: 1988
Published by: ಸಾಹಿತ್ಯ ಪ್ರಕಾಶನ,
Address: ಸಿಟಿ ಕ್ಲಿನಿಕ್‌ ,ಸಂಕೀರ್ಣ, ದಾಜೀಬಾನ್‌ ಪೇಟೆ, ಹುಬ್ಬಳ್ಳಿ- 580028

Synopsys

'ಯಮದೂತರು' ಲೇಖಕ ಸುದರ್ಶನ ದೇಸಾಯಿ ಅವರ ಕಾದಂಬರಿ. ಭಿನ್ನ ಕಥಾವಸ್ತುವನ್ನು ಹೊಂದಿದ್ದು, ಪ್ರಭಾವಿ ವ್ಯಕ್ತಿಗಳ ಮನೆಯಲ್ಲಿರುವ ಶ್ವಾನಗಳೂ ಕ್ರೂರವಾಗಿರುತ್ತದೆ ಎಂದೇ ಪ್ರಾರಂಭವಾಗುವ ಕಾದಂಬರಿಯು, ಶ್ರೀಮಂತ ವ್ಯಕ್ತಿಗಳು ಬಡವರ ಮೇಲೆ ನಡೆಸುವ ದಬ್ಬಾಳಿಕೆಯನ್ನು ಚಿತ್ರಿಸಲಾಗಿದೆ. ಕೌಟುಂಬಿಕ ಸಮಸ್ಯೆ ಕೊಲೆಯ ಹಂತಕ್ಕೆ ಬಂದು, ಹೆಣ್ಣೊಬ್ಬಳ ಬಾಳಿನಲ್ಲಿ ಯಾವ ರೀತಿಯ ತಿರುವುಗಳನ್ನು ಪಡೆಯುತ್ತದೆ ಎನ್ನುವುದರ ಸುತ್ತ ಕಥೆಯು ಸಾಗುತ್ತದೆ. 

 

About the Author

ಸುದರ್ಶನ ದೇಸಾಯಿ
(14 January 1945 - 31 July 2012)

ಲೇಖಕ ಸುದರ್ಶನ ದೇಸಾಯಿ ಅವರು ಮೂಲತಃ ಧಾರವಾಡದವರು. ತಂದೆ- ಕೃಷ್ಣರಾವ ರಾಮಾರಾವ ದೇಸಾಯಿ. ತಾಯಿ- ರಾಧಾಬಾಯಿ. ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಎಚ್. ತರಬೇತಿ ಪಡೆದು  ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ  ಶಿಕ್ಷಕರಾಗಿ ದುಡಿದರು.1977ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು.  ಪ್ರಜಾಮತ ವಾರಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತಮ್ಮ ಸಪ್ತಪದಿ ಕತೆಗೆ ಮೂರನೆ ಬಹುಮಾನ ಪಡೆದರು. ಆನಂತರದಲ್ಲಿ ಸುಮಾರು 60ಕ್ಕೂ ಹೆಚ್ಚು ಸಣ್ಣಕತೆಗಳನ್ನು ರಚಿಸಿದರು. ಅವರ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ...

READ MORE

Related Books