ತಪಸಹನ

Author : ಡಿ ಎನ್. ಕೃಷ್ಣಮೂರ್ತಿ

Pages 200

₹ 0.00




Year of Publication: 1993
Published by: ಪುನಶ್ಚೇತನ ಪ್ರಕಾಶನ
Address: ದೊಡ್ಡಮಾರಗೌಡನಹಳ್ಳಿ, ಮೈಸೂರು ತಾಲ್ಲೂಕು, ಮೈಸೂರು -570026
Phone: 9008149968

Synopsys

ಈ ಕಾದಂಬರಿಯ ನಾಯಕ ವಿವೇಕ ಜೀವನ್ಮರಣಗಳ ನಡುವೆ ಬಂದು ಹೋಗುವ ವೈಪರೀತ್ಯಗಳನ್ನು ತನ್ನ ಅಂತ:ಶಕ್ತಿಯಲ್ಲಿ ತಡೆಹಿಡಿದಿಡಬಲ್ಲ ಸಂವೇದನಾಶೀಲ. ಅಂತಹ ಸೂಕ್ಷ್ಮ ಸಂವೇದನೆಯಿರುವ ಈತ ಬೇರೆಯವರಿಗಿಂತ ಭಿನ್ನವಾಗಿ, ಜೀವನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಸಂಚಲನ ಶಕ್ತಿಯನ್ನು ಹೊಂದಿರುತ್ತಾನೆ. ಅದಕ್ಕೆ ಪೂರಕವಾಗಿ ಶಾಂತಿ, ಸಹನೆ ಮುಂತಾದ ಮಹತ್ವದ ಗುಣಗಳನ್ನು ಅಭಿವ್ಯಕ್ತಿಸುತ್ತಾನೆ. ಸಹನೆಯನ್ನೇ ತನ್ನ ಜೀವನದ ತಪಸ್ಸೆಂದು ಬಗೆದು, ಜೀವನದಲ್ಲಿ ಎದುರಾಗುವ ಎಲ್ಲ ಸಂಕಷ್ಟಗಳನ್ನೂ ಎದುರಿಸಿ ನಿಂತು ಹೋರಾಡಿದ ಸಹನಾಮೂರ್ತಿಯ ಜೀವನವನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.

About the Author

ಡಿ ಎನ್. ಕೃಷ್ಣಮೂರ್ತಿ
(04 June 1963)

ಡಿ. ಎನ್. ಕೃಷ್ಣಮೂರ್ತಿಯವರು ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಯವರು. ತಂದೆ ಎಸ್. ನಂಜುಂಡಯ್ಯ, ತಾಯಿ ಶಾರದಮ್ಮ. ಸಾಹಿತ್ಯ ವಲಯದಲ್ಲಿ  ಇವರು  ಡಿಎನ್ಕೆ ಎಂದೇ ಪರಿಚಿತರು.  ಕೃತಿಗಳು: ದತ್ತೂರಿಗಿಡ, ಮರೀಚಿಕೆ, ಪರಿವರ್ತನೆ, ಕರ್ಪೂರದ ಗೊಂಬೆ, ಮುಳುಗಿದ ದೋಣಿ,(ಕಿರು ಕಾದಂಬರಿಗಳು), ಜನಮನ (ಪ್ರಬಂಧ ಸಂಕಲನ-ಸಂಪಾದಿತ), ಓಕುಳಿ, ಬೆಳಕು (ಕವನ ಸಂಕಲನ), ಚೈತ್ಯ ಚೈತ್ರ(ಕವನ ಸಂಕಲನ-ಸಂಪಾದಿತ), ರಾಜಯೋಗಿ (ವಚನ ಸಂಕಲನ), ಶಾಂತಿಭೂಮಿ, ತಪಸಹನ, ಸೂರ್ಯಾಸ್ತಮ, ವಸುಂಧರ, ಮಣ್ಣಿನ ಋಣ, ಹೃದಯವಂತ, ಆಕ್ರಂದನ, ಚೈತ್ರಯಾತ್ರೆ, ಗ್ರಾಮಾಂತರ, ಕರ್ಮಭೂಮಿ (ಕಾದಂಬರಿಗಳು), ನೇಸರ (ಕವನ ಸಂಕಲನ), ಕಾವ್ಯ ಕುಸುಮಾಂಜಲಿ-(ಕವನ ಸಂಕಲನ - ಸಂಪಾದಿತ), ಸಂಘರ್ಷಣೆ (ಕಥಾ ಸಂಕಲನ), ಜೀವನದಿ, (ಲೇಖನಗಳು), ಮಹಾಸಾಗರದ ಮುತ್ತುಗಳು (ವ್ಯಕ್ತಿ ಚಿತ್ರಗಳು -ಸಂಪುಟ 1), ಭಾರತದ ಅನರ್ಘ್ಯ ರತ್ನಗಳು- (ವ್ಯಕ್ತಿ ಚಿತ್ರಗಳು - ಸಂಪುಟ 2), ಮಾತೃಭೂಮಿಯ ಮಾಣಿಕ್ಯಗಳು (ವ್ಯಕ್ತಿ ಚಿತ್ರಗಳು - ಸಂಪುಟ 3), ಕನ್ನಡ ಸಾಹಿತ್ಯದ ಸೀಮಾಪುರುಷ (ಮಾಸ್ತಿ ...

READ MORE

Related Books