ಅನಾಥ ಪ್ರೀತಿಯ ಅನುಬಂಧ

Author : ಬಿ. ಮಂಜುನಾಥ ಕಾಮತ್ ಹಾಲಾಡಿ

Pages 112

₹ 140.00
Year of Publication: 2023
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಅನಾಥ ಪ್ರೀತಿಯ ಅನುಬಂಧ.’ ಮಂಜುನಾಥ ಕಾಮತ್‌ ಹಾಲಾಡಿ ಅವರ ಕಿರು ಕಾದಂಬರಿಯಾಗಿದೆ. ಎರಡು ವಿಭಿನ್ನ ಧರ್ಮದ ಎಳೆಯ ಪ್ರೇಮಿಗಳ ಕಾಲೇಜು ವ್ಯಾಸಂಗದ ಕಿರು ಅವಧಿಯಲ್ಲಿ ಅಂಕುರಿಸಿದ ಪ್ರೀತಿಯು ವಿವಿಧ ಆಕಸ್ಮಿಕ ತಿರುವುಗಳನ್ನು ಪಡೆಯುವ ಮತ್ತು ಜಾತಿ, ಮತ, ಕುಲ ಗೋತ್ರದ ಎಲ್ಲೆಕಟ್ಟನ್ನು ಮೀರಿದ ಪ್ರೀತಿಯ ಶಕ್ತಿಯನ್ನು ಪ್ರತಿಬಿಂಬಿಸುವ ರೋಚಕತೆಯನ್ನು ಹೊಂದಿದೆ.

About the Author

ಬಿ. ಮಂಜುನಾಥ ಕಾಮತ್ ಹಾಲಾಡಿ

ಬಿ. ಮಂಜುನಾಥ ಕಾಮತ್, ಹಾಲಾಡಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಹಾಲಾಡಿ, ಶಂಕರನಾರಾಯಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಪಡೆದರು. ನಂತರ ಕುಂದಾಪುರದ ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಬಿ.ಎಸ್ಸಿ ಪೂರ್ಣಗೊಳಿಸಿದ್ದಾರೆ. ಸಿಂಡಿಕೇಟ್‌ ಬ್ಯಾಂಕಿನ ಮಥುರಾ, ನವದೆಹಲಿ, ಮಂಗಳೂರು, ಬೆಳಗಾವಿ, ಶಂಕರನಾರಾಯಣ ಶಾಖೆ-ಕಚೇರಿಗಳಲ್ಲಿ ಮೂವತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಹಾಲಾಡಿಯ ಬೆಳಾರಮಕ್ಕಿಯಲ್ಲಿ ನೆಲೆಸಿದ್ದಾರೆ. ಯಕ್ಷಗಾನ, ನಾಟಕ, ಸಾಹಿತ್ಯದಲ್ಲಿ ಬಾಲ್ಯದಿಂದಲೇ ಆಸಕ್ತಿ ಹೊಂದಿರುವ ಅವರು ಕನ್ನಡ ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಐವತ್ತು ವರ್ಷಗಳಿಂದ ಕಥೆ, ಕವನ, ಲೇಖನಗಳು ಪ್ರಕಟಿಸಿದ್ದಾರೆ. ಕೃತಿಗಳು: 'ಮತ್ತೊಂದು ದಿನ ಮತ್ತು ...

READ MORE

Related Books