ವಾರಸುದಾರ

Author : ಗೀತಾ ಬಿ.ಯು

Pages 150

₹ 110.00
Year of Publication: 2018
Published by: ಸುಧಾ ಎಂಟರ್ ಪ್ರೈಸಸ್
Address: ನಂ. 761, 8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು- 560034

Synopsys

'ವಾರಸುದಾರ' ಲೇಖಕಿ ಗೀತಾ ಬಿ.ಯು ಅವರ ಸಾಮಾಜಿಕ ಕಾದಂಬರಿ. ಮಕ್ಕಳು ತಂದೆ ತಾಯಿಯ ಆಸ್ತಿಗೆ ವಾರಸುದಾರರು. ಹುಟ್ಟಿನಿಂದ ಬರುವ ಈ ವಾರಸುದಾರತ್ವ ಬರೀ ಹಣಕಾಸಿನ ವಿಚಾರಕ್ಕೆ ಸೀಮಿತವಾಗಿರುತ್ತದೆ ಏಕೆ? ತಂದೆಯ ಆಸ್ತಿಗೆ ವಾರಸುದಾರನಾಗುವ ಮಗ, ಆ ತಂದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರೆ. ಆ ಸೇವೆಯನ್ನು ಮುಂದುವರಿಸುವ ಬಾಧ್ಯತೆಯನ್ನು ಅವನು ಹೊರಬೇಕಾಗುತ್ತದೆ ಎಂಬುದು ಲೇಖಕಿ ಗೀತಾ ಅವರ ಆಶಯ. ಈ ಕಾದಂಬರಿಯಲ್ಲಿ ಸಂಬಂಧಗಳ ಸೂಕ್ಷ್ಮತೆಯನ್ನು ವಿಶ್ಲೇಷಿಸಲಾಗಿದೆ. ಅನಿರೀಕ್ಷಿತವಾಗಿ ಸಿಕ್ಕ ಹಣ, ಅದರ ವಾರಸುದಾರತ್ವ ಲೇಖಕಿಯ ಕಲ್ಪನೆಯಲ್ಲಿ ಹೊಸ ರೂಪ ಪಡೆದಿದೆ.

About the Author

ಗೀತಾ ಬಿ.ಯು

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ  ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’  ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...

READ MORE

Related Books