ಬೆಳದಿಂಗಳ ಚೆಲುವೆ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 184

₹ 120.00
Year of Publication: 2013
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560075
Phone: 98454 49811

Synopsys

ಈ ಕಾದಂಬರಿಯ ಮುಖ್ಯ ವಿಷಯ ಪ್ರೀತಿ, ಪ್ರೇಮ, ದಾಂಪತ್ಯ. ಕೆಲವೊಮ್ಮೆ ಯಾರಿಗೆ ಎಲ್ಲಿ ತಮ್ಮ ಬಾಳಸಂಗಾತಿ ಸಿಗುವರೊ.... ಸರಿಯಾದ ಸಂಗಾತಿ ಸಿಕ್ಕಿದರೆ ಅದೃಷ್ಟವಂತರು, ಆ ಸಂದರ್ಭ, ಸನ್ನಿವೇಶಗಳು ಅವರ ಜೀವನದ ಸಂತಸದ ಕ್ಷಣಗಳು, ಪ್ರತಿಯೊಬ್ಬರ ಜೀವನದಲ್ಲೂ ಬರುವ ಸಂತಸದ ಘಟ್ಟ, ಬದುಕಿನ ಅದ್ಭುತಗಳಲ್ಲಿ ಒಂದು. ಚಿಕ್ಕಂದಿನಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡ ಭರತನನ್ನು ಯಾವುದೇ ಕೊರತೆ ಆಗದಂತೆ ಪ್ರೀತಿಯಿಂದ ಬೆಳೆಸಿದ್ದು, ತಾತ ಶಶಿಭೂಷಣ. ಸುಂದರ, ದೃಢ ವ್ಯಕ್ತಿತ್ವದ ಭರತ್, ಭರತ್ ಟ್ರಾನ್ಸ್‌ಪೋರ್ಟ್‌ನ M.D. ಅವನ ಕಾರ್ಯದಕ್ಷತೆಯಿಂದ ಸುಗಮವಾಗಿ ಸಾಗುತ್ತಿರುವ ಬಿಸಿನೆಸ್‌ಗೆ , ಕೆಲವರಿಂದ ಅಪಾಯದ ಸೂಚನೆಯೂ ಇತ್ತು. ನಿನ್ನ ಬದುಕನ್ನು ತುಂಬ ಬೇಕಾದವು ಲಿಪ್‌ಸ್ಟಿಕ್ ತರುಣಿಯಲ್ಲ, ಬೆಳದಿಂಗಳ ಚೆಲುವೆ ಎಂಬ ತಾತ ಶಶಿಭೂಷಣ್ ಮಾತು ಭರತ್ ಮನಸಿನಲ್ಲಿ ಉಳಿದಿತ್ತು. ಹೇಮಳ ಮದುವೆಗೆಂದು ಮಂಗಳೂರಿಗೆ ಹೋದ ಮದುವೆಯಲ್ಲಿ ಭರತ್‌ಗೆ, ನಯನಳ ಪರಿಚಯವಾಗಿ, ನಂತರದ ಒಂದು ಅನಿರೀಕ್ಷಿತ ಘಟನೆಯಿಂದ ಅವನ ಮನಸ್ಸಿನಲ್ಲಿ ಉಳಿದಳು. ಪದೇ ಪದೇ ಕಾಡುವ ಭರತ್‌ನಿಂದ ಆದಷ್ಟೂ ದೂರ ಇರಲು ಪ್ರಯತ್ನಿಸಿ ನಯನ ಸೋತುಹೋದಳು, ಇನ್ನೊಂದು ಕಡೆ ಭರತ್‌ನ ಸರಳ ಸ್ವಭಾವ, ಸ್ನೇಹಕ್ಕೆ ಸೋತ ವಾಸಂತಿ, ಚಿಕ್ಕಂದಿನ ಆತನ ಸ್ನೇಹ, ಒಡನಾಟದಲ್ಲಿದ್ದವಳು, ಭರತ್‌ನಲ್ಲಿ ಹುಚ್ಚು ಪ್ರೀತಿ ಹೇಮಾಗೆ. ನಯನ, ಹೇಮ, ವಾಸಂತಿ ಮೂವರು ವಿಭಿನ್ನ ವ್ಯಕ್ತಿತ್ವದ ಗೆಳತಿಯರಲ್ಲಿ ಭರತ್‌ನ ಬೆಳದಿಂಗಳ ಚೆಲುವೆ ಯಾರು ? ಎಂಬುದೇ ಕಾದಂಬರಿಯ ಕುತೂಹಲ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books