ಮಣ್ಣಿಂದ ಎದ್ದವರು

Author : ಕುಸುಮಾ ಶಾನುಭಾಗ

Pages 132

₹ 80.00




Year of Publication: 2009
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪ್ರಕಾಶನ, ಎಂಬೆಸ್ಸೆ ಸೆಂಟರ್, ಕ್ರಸೆಂಟ್ ರಸ್ತೆ, ಬೆಂಗಳೂರು

Synopsys

ಕಾವೇರಿ ಎಂಬ ಯುವತಿಯ ಮೂಲಕ ಪುರುಷಾಧಿಪತ್ಯ ಸಮಾಜದಲ್ಲಿ ಹೆಣ್ಣು ಅನುಭವಿಸುವ ನೋವು, ತವಕ ತಲ್ಲಣಗಳನ್ನು ಲೇಖಕಿ ತಮ್ಮ ಕಾದಂಬರಿಯ ಪಾತ್ರದ ಮೂಲಕ ಹೇಳಹೊರಡುತ್ತಾರೆ. ಪ್ರತಿ ಮಹಿಳೆಯು ದಿಟ್ಟವಾಗಿರಲು ಸ್ವಾಭಿಮಾನದಿಂದ ಬದುಕಬೇಕು ಎಂಬುದನ್ನು ಸರಳ ಭಾಷೆಯ ಮೂಲಕ ವಿವರಿಸಿಲಾಗಿದೆ. ಕಾಲ ಬದಲಾಗಿದೆ ಆದರೆ ಹೆಣ್ಣಿನ ಪರಿಸ್ಥಿತಿ ಮೊದಲಿನಂತೆಯೇ ಇದೆ ಎಂಬುದನ್ನು ಉದಾಹರಣೆ ಸಮೇತವಾಗಿ ಕುಸುಮಾ ಅವರು ವಿವರಿಸಿದ್ದಾರೆ. ಮಹಿಳೆಯರಿಗೂ ಆಸ್ತಿ ಒಡೆತನದ ಹಕ್ಕು ಇದೆ ಎಂಬುದನ್ನು ದೃಢವಾದ ಧ್ವನಿಯೊಂದಿಗೆ ಕಾವೇರಿ ಕೇಳಿದ ಬಗೆ, ಆ ಕಾಲಕ್ಕೆ ಅದೊಂದು ಕ್ರಾಂತಿಕಾರಕ ಹೆಜ್ಜೆಯಂತಿದೆ.

About the Author

ಕುಸುಮಾ ಶಾನುಭಾಗ

ಕನ್ನಡದ ಅತ್ಯತ್ತಮ ಸ್ತ್ರೀ ಚಿಂತಕಿ, ಬರಹಗಾರ್ತಿಯರಲ್ಲಿ ಒಬ್ಬರು ಕುಸುಮಾ ಶಾನಭಾಗ. ಪತ್ರಕರ್ತೆ, ಬರಹಗಾರ್ತಿ ಅವರು ಮೂಲತಃ ಕೊಡಗಿನವರು. ಪ್ರಜಾವಾಣಿ ದಿನಪತ್ರಿಕೆ ಉದ್ಯೋಗಿಯಾಗಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಲೈಂಗಿಕ ಕಾರ್ಯಕರ್ತರ ಕುರಿತು ಸುಮಾರು ಹತ್ತು ವರ್ಷಗಳಿಗೂ ಹೆಚ್ಚುಕಾಲ ಅಧ್ಯಯನ ನಡೆಸಿದ್ದಾರೆ. “ನೆನಪುಗಳ ಬೆನ್ನೇರಿ”ಎಂಬ ಕಥಾಸಂಕಲನವನ್ನು ಹೊರತಂದಿದ್ದಾರೆ. ನವಕರ್ನಾಟಕ ಪ್ರಕಾಶನದ ವನಿತಾ ಚಿಂತನ ಮಾಲೆಯಿಂದ ಹೊರಬಂದ ಕುಸುಮಾ ಶಾನುಭಾಗರ ’ಮಣ್ಣಿಂದ ಎದ್ದವರು’ ಎಂಬ ವಿಶಿಷ್ಟ ಕಾದಂಬರಿ , ಸ್ತ್ರೀ ಸಮುದಾಯದ ಒಳಕಾಳಜಿಗಳ ಒಟ್ಟಾರೆ ಆಳ ಮತ್ತು ಅಗಲವನ್ನು ತೆರೆದಿಡುವ ಕೌಟುಂಬಿಕ ವಿಸ್ತಾರದ ಸುದೀರ್ಘ ಬರವಣಿಗೆಯ ತಾಜಾ ಕೃತಿಯಾಗಿದೆ. ...

READ MORE

Related Books