ದಲಿತ ಹೆಣ್ಣಿನ ನಖರಾ ಅವಳ ಸುತ್ತಲು ನಡೆಯುವ ನಗೆಚಾಟಿಕೆ, ಪ್ರೀತಿವಾತ್ಸಲ್ಯ, ಸ್ನೇಹ ಮೋಜು, ಸಂಕಟ, ಸಮಸ್ಯೆಗಳಿಗೆ ಹೀಗೆ ಬದುಕಿನ ಹತ್ತು ಹಲವು ಮಜಲುಗಳ ಮುಂದೆ ಸಮಾಜ ಬೆತ್ತಲಾಗಿ ನಿಂತಿರುವ ಕಾದಂಬರಿ ‘ದಂಗೆ’. ಹುಟ್ಟು ತಬ್ಬಲಿಯಾದ ಒಬ್ಬ ದಲಿತ ಹೆಣ್ಣು ಮಗಳು ಜೀವನದುದ್ದಕ್ಕೂ ತನ್ನ ಬದುಕನ್ನು ಕಲ್ಲುಮುಳ್ಳುಗಳ ನಡುವೆಯೇ ನಡೆಸಿಕೊಂಡು ಬರುವ ಅನಿವಾರ್ಯತೆ; ಅಸಹಾಯಕತೆ ಗಳಿಂದ ಹೈರಾಣಾಗಿ ಕೊನೆಗೆ ಒಂದು ನೆಲೆ ಸಿಕ್ಕಿತು ಅನ್ನುವಾಗ, ಅವಳು, ತಾನು ಪ್ರೀತಿಸಿದವನ ಮತ್ತು ತನ್ನನ್ನೂ ಪ್ರೀತಿಸಿದವನ ವಿರುದ್ಧ ಏಕದಂ ದಂಗೆ ಏಳುತ್ತಾಳೆ ಆದರೆ ಯಾವ ಅಂತಃಕರಣಕ್ಕಾಗಿ, ಏನನ್ನು ಪಡೆಯುವುದಕ್ಕಾಗಿ 'ದಂಗೆ' ಏಳುತ್ತಾಳೆ ಎಂಬುದು ಕಾದಂಬರಿಯ ಆಕರ್ಷಣೆಯಾಗಿದೆ.
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE