ನರಸಿಂಗರಾಯ

Author : ಸ. ರಘುನಾಥ

Pages 340

₹ 300.00
Year of Publication: 2021
Published by: ನಿವೇದಿತ ಪ್ರಕಾಶನ
Address: #3437(1ನೇ ಮಹಡಿ), 4ನೇ ಮುಖ್ಯರಸ್ತೆ, 9ನೇ ಅಡ್ಡ ರಸ್ತೆ, ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ ಬೆಂಗಳೂರು-70
Phone: 9448733323

Synopsys

‘ನರಸಿಂಗರಾಯ’ ಸ. ರಘುನಾಥ ಅವರ ಕಾದಂಬರಿಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಉಮೇಶ್ ನಾಗಮಂಗಲ ಅವರು,’ಕಥೆ, ಕಾವ್ಯ, ವ್ಯಕ್ತಿಚಿತ್ರ, ಸಾಹಿತ್ಯ, ಸಂಸ್ಕೃತಿ ಲೇಖನ, ಅನುವಾದ, ಜಾನಪದ, ಗ್ರಂಥಸಂಪಾದನೆ, ಸಾಮಾಜಿಕ ಕೆಲಸಕಾರ್ಯ ಎಂದೇ ಕಾಲ ಕಳೆಯುವ ಈ ವ್ಯಕ್ತಿ, ಕಾದಂಬರಿಯೊಂದು ಬರೆಯಬೇಕೆಂಬ ಆಶಯ ಪ್ರಕಾಶಕನಾಗಿ ನನ್ನದಾಗಿತ್ತು. ಸದ್ದಿಲ್ಲದೆ ಅದನ್ನು ಮಾಡಿದ್ದಾರೆ. ನೋವುಗಳನ್ನು ತುಳಿಯಲೆಂದೇ ಇವರು ಕೆಲಸಗಳನ್ನು ಹೊರುತ್ತಾರೇನೋ ಎಂದು ನನಗನ್ನಿಸುವುದಿದೆ. ಅವರ ಗೆಳೆಯರು ‘ಕೆಲಸವೇ ಅವರ ವಿಶ್ರಾಂತಿ’ಎಂದು ಹೇಳುವುದರಲ್ಲಿ ನಿಜವಿದ್ದೀತು. ಇದು ಅವರು ನಿರ್ವಹಿಸುವ ಕೆಲಸಗಳನ್ನು ಗಮನಿಸುವ ಯಾರಾದರೂ ಹೇಳುವಂತಹ ಮಾತ” ಎಂದು ಇಲ್ಲಿ ಹೇಳಿದ್ದಾರೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books