ಗುಂದ

Author : ಸುಬ್ರಹ್ಮಣ್ಯ ಹೆಗಡೆ ಅಬ್ಳಿ.

Pages 125

₹ 150.00




Year of Publication: 2022
Published by: ಕಲ್ಲಚ್ಚು ಪ್ರಕಾಶನ
Address: ಮಂಗಳೂರು - 575008. ದ.ಕ. ಕರ್ನಾಟಕ, ಭಾರತ
Phone: 9880692447

Synopsys

ಸುಬ್ರಹ್ಮಣ್ಯ ಹೆಗಡೆ ಅಬ್ಳಿ ಅವರ ಕಾದಂಬರಿ ಗುಂದ. " ಗುಂದ" ಅಂದರೆ ಅಡಿಪಾಯ ತೋಡಿದ್ದಾರೆ. ಆ ಅಡಿಪಾಯದ ಮೇಲೆ ಮುಂದಿನ ಬರವಣಿಗೆಯ ಬೆಳವಣಿಗೆಯ ಭವಿಷ್ಯ ನಿಂತಿದೆ. ಅವರಿಗೆ ಬರವಣಿಗೆ ಮುಂದಿನ ದಿನಗಳಲ್ಲಿ ಸಿದ್ಧಿಸಲಿದೆ ಎಂಬುದು ಪ್ರಥಮ ಕೃತಿಯ ಬರವಣಿಗೆಯಲ್ಲಿಯೇ ಹೇಳಬಹುದು. ಸುಬ್ರಹ್ಮಣ್ಯ ಹೆಗಡೆ ಅವರು ತನ್ನ ಪರಿಸರ , ತಾನು ಕಂಡ ವ್ಯಕ್ತಿತ್ವ ಅದರ ಚೌಕಟ್ಟಿನಲ್ಲಿ ತನ್ನ " limitations" ನಲ್ಲಿಯೇ ಕತೆಯನ್ನು ಹೆಣೆಯುತ್ತಾ ಸಾಗುತ್ತಾರೆ. ಇಲ್ಲಿ ಯಾವುದೇ ಆಡಂಬರದ ಶಬ್ದಗಳನ್ನು ಅವರು ಬಳಸಿಲ್ಲ. ಅವನ್ನೆಲ್ಲ ಬದಿಗೆ ಸರಿಸಿಟ್ಟು ತಮ್ಮ ಇತಿಮಿತಿಯಲ್ಲಿ ತಮಗೆ ಅನುಕೂಲಕರವಾದ ಸುಲಭದ ಆಡು ಭಾಷೆಯಲ್ಲಿಯೇ ಕತೆ ಸಾಗಿಸಿದ್ದಾರೆ. ಕತೆ ಮತ್ತು ಘಟನೆಗಳು ಹಳತಾದರೂ ಹಳಸದೇ ಇರುವದಕ್ಕೆ ಕಾರಣ ಗ್ರಾಮೀಣ ಪ್ರದೇಶದ ಭಾಷೆಯ ಬಳಕೆ. ಅದು ಓದುವ ಹಳೆಯ ತಲೆಮಾರಿಗೆ ನೆನಪಾಗಿಸಿದರೆ ಹೊಸ ತಲೆಮಾರಿಗೆ ಅಚ್ಚರಿಯ ವಿಶೇಷತೆ ನೀಡುತ್ತದೆ. ಕತಾ ವಸ್ತು ತಮ್ಮ ಸುತ್ತಲಿನ ಪರಿಸರ ಮತ್ತು ಹಳ್ಳಿಯ ಅಪ್ಪಟ ಭಾಷೆ, ಗುಣ ಸ್ವಭಾವದ ಮೂಲಕ ಕತೆಯ ಪಾತ್ರಗಳನ್ನು ರೂಪಿಸಿದ್ದರಿಂದ ಮೆಚ್ಚುಗೆ ಗಳಿಸುತ್ತದೆ. ಹೊಸಬರು ಕೇಳರಿಯದ ಆಕರ್ಷಕ ಶಬ್ದಗಳು ಇದೆ. ಆ ಶಬ್ದಗಳು ನಾಲಿಗೆಯನ್ನು ಒಮ್ಮೊಮ್ಮೆ ಜಾರಿಸಿ ಬಿಡುತ್ತದೆ. ಬಹಳ ಗಡುಚಾಗಿದೆ ಹೀಗಾಗಿ ಅಲ್ಲಲ್ಲಿ ಓದು ಸರಿಯಾದ ಶಬ್ದೋಚ್ಚಾರಕ್ಕಾಗಿ ನಿಂತು ಸಾಗಬೇಕಾಗುತ್ತದೆ. ಉಗ್ರ ಶಬ್ದಗಳು ಕೆಲವು ಸೌಮ್ಯ ಶಬ್ದಗಳು ಕತೆಯ ಪಾತ್ರ ಚಿತ್ರಣಕ್ಕೆ ಹೊಂದಿ ಕೃತಿಯನ್ನು ಶೃಂಗರಿಸಿಕೊಳ್ಳುತ್ತಾರೆ. ಅನೇಕ ಅಂತಹ ಶಬ್ದಗಳು ಗಮನಿಸುವಂತೆ ಮಾಡಿ ಗಮನ ಸೆಳೆಯುತ್ತಾರೆ. " ನೆರ್ವಾಹ" "ಪೊಟ್ಲೆ" " ಬಾಂಬ್ರ ಮನಿ" " ದೇಸ್ತಾನ" " ಅಡ್ಚಿಣಿ" "ಅಫೂಟ್ಕಾಸಿಲ್ಲ" "ಚಂಚಿ" " ಅವೀ" " ಕುಕ್ಕರಗಾಲು" ಇಂತಹ ಅಂದಿನ ಸ್ವಾಭಾವಿಕ ನೂರಾರು ಆಡು ಭಾಷೆಯು ಸುಬ್ರಹ್ಮಣ್ಯ ಹೆಗಡೆಯವರದ್ದೇ ಕತಾ ಶೈಲಿಯ ಸ್ಪೆಷಾಲಿಟಿ ಎಂದನಿಸಿಕೊಳ್ಳುತ್ತದೆ. ಅಂದಿನ ವಡೆಯಾ ,ಒಕ್ಕಲಿನ ನಡುವಿನ ಸಾಮರಸ್ಯದ ಬದುಕು , ಅವರ ನಡುವಿನ ಅಂತರಂಗದ ಹೊರ-ಒಳ ಭಾವನೆಗಳನ್ನು ಬಹಳ ಚಂದವಾಗಿ ಯತಾವತ್ತಾಗಿ ಇಟ್ಟಿದ್ದಾರೆ. ಇವು ಕಾಲ್ಪನಿಕ ಕತೆ ಅಲ್ಲ. ಕತೆಯ ಲೇಖಕರ ಸುದೀರ್ಘ ಬದುಕಿನ ಕಂಡರಿತ ಅನುಭವದ ವಾಸ್ತವಿಕ ಸಂಗತಿಗಳನ್ನೇ ತೆರೆದಿರಿಸಿದ್ದಾರೇನೋ ಅನಿಸುತ್ತದೆ. ಇಲ್ಲಿ ಆ ಒಂದಾನೊಂದು ಕಾಲದ ಕೃಷಿ ವಿಚಾರ ಇದೆ, ಸರಕಾರೀ ಆಫೀಸ್ ನ ಕಾರ್ಯ ವೈಖರಿ , ಮೃಗ ಭೇಟೆಯ ವಿಚಾರ ಇದೆ ,ಆರ್ಥಿಕ , ಇತರೇ ವ್ಯಾವಹಾರಿಕ ಸಂಗತಿ ನೈಜತೆಯಿಂದ ಕೂಡಿದ ಕತೆಯಾಗುತ್ತದೆ. ಒಟ್ಟಿನಲ್ಲಿ " ಗುಂದ" ಓದುವಾಗ ಹೊಸ ನಮೂನೆಯ ಅಂದ ಸಿಗುತ್ತದೆ. ಸಾಹಿತ್ಯ ಪ್ರಪಂಚಕ್ಕೆ ಬಂದಿದ್ದು ತಡವಾಗಿಯಾದರೂ ಅವರ ಪಕ್ವವಾದ ಜೀವನಾನುಭವ ಕತೆ ಹೆಣೆಯುವದಕ್ಕೆ ಅದು ಸೂಕ್ತ ಸಮಯವಾಗಿದೆ.

About the Author

ಸುಬ್ರಹ್ಮಣ್ಯ ಹೆಗಡೆ ಅಬ್ಳಿ.

ಹೊನ್ನಾವರ ತಾಲೂಕಿನ ಮುಗ್ವಾ ಮೂಲದವರು ಸುಬ್ರಹ್ಮಣ್ಯ ಹೆಗಡೆ ಅಬ್ಳಿ.ಅಬ್ಳಿ ಎನ್ನುವದು ಅವರ ಕುಟುಂಬದ ಹೆಸರು. ಕೃಷಿಯನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ಇವರು ಕಲೆ,ಸಾಹಿತ್ಯ.ಓದು,ಬರವಣಿಗೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಅಂತರ್ಜಾಲ ಪತ್ರಿಕೆ ಗಳಲ್ಲಿ ಕಥೆ,ಕವನಗಳು ಬಹಳಷ್ಟು ಪ್ರಕಟವಾಗಿವೆ. ಕೃತಿ: 'ಗುಂದ' ಪ್ರಕಟವಾಗಿರುವ ಕಾದಂಬರಿ. ...

READ MORE

Related Books