ಕಾಲಾಯ ತಸ್ಮೈ ನಮಃ

Author : ಕೌಶಿಕ್ ಕೂಡುರಸ್ತೆ

Pages 96

₹ 100.00
Year of Publication: 2020
Published by: ಸ್ನೇಹ ಬುಕ್ ಹೌಸ್
Address: ನಂ.165, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು- 560050
Phone: 984531335

Synopsys

‘ಕಾಲಾಯ ತಸ್ಮೈ ನಮಃ’ ಕೌಶಿಕ್ ಕೂಡುರಸ್ತೆ ಅವರು ರಚಿಸಿರುವ ಪತ್ತೇದಾರಿ ಕಾದಂಬರಿ. ಈ ಕೃತಿಗೆ ಪ್ರಶಾಂತ ಭಟ್ ಹಾಗೂ ಗುಬ್ಬಚ್ಚಿ ಸತೀಶ್ ಅವರ ಬೆನ್ನುಡಿಯಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಆತ್ಮೀಯ ಎಂಬ ಸತ್ಯ ಘಟನೆ ಆಧಾರಿತ ಕಾದಂಬರಿ ಬರೆದ ಕೌಶಿಕ್ ಎರಡನೆಯ ಪ್ರಯತ್ನವಾಗಿ ಕಾದಂಬರಿ ಬರೆದಿದ್ದಾರೆ ಅನ್ನುವಾಗ ಆಶ್ಚರ್ಯವಾಗಿತ್ತು. ಈ ಪ್ರಕಾರದಲ್ಲಿ ಓದುಗರ ಕುತೂಹಲ ಕಾದಿಟ್ಟುಕೊಂಡು ಕತೆ ಹೆಣಿಗೆ ಜಾಡು ತಪ್ಪದ ಹಾಗೇ ಬರೆಯುವುದು ಕಷ್ಟವೇ, ಆದರೆ ಈ ಕಾದಂಬರಿ ಓದುವಾಗ ಓದುಗನಿಗೆ ಕೊನೆಯವರೆಗೆ ಗುಟ್ಟು ಬಯಲಾಗದಂತೆ ಬರೆದ ರೀತಿ ಖುಷಿ ಕೊಟ್ಟಿತು’ ಎನ್ನುತ್ತಾರೆ ಪ್ರಶಾಂತ್ ಭಟ್.

ಜೊತೆಗೆ ಒಳ್ಳೆಯ ನಿರ್ದೇಶಕ ಸಿಕ್ಕರೆ ಕುತೂಹಲಭರಿತ ಸಿನಿಮಾ ಆಗಬಲ್ಲ ಕಥೆಯೊಂದು ಇಲ್ಲಿದೆ, ಕೌಶಿಕ್ ರ ಲೇಖನಿಯಿಂದ ಮುಂದೇನು ಬರಬಹುದು ಎಂಬ ಕುತೂಹಲ ನನಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಕೌಶಿಕ್ ಕೂಡುರಸ್ತೆ

ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ. ‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ...

READ MORE

Related Books