ಅಳಿದ ಮೇಲೆ

Author : ಶಿವರಾಮ ಕಾರಂತ

Pages 215

₹ 125.00

Buy Now


Year of Publication: 2013
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

‘ಅಳಿದ ಮೇಲೆ’ ಎಂಬುದು ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿಗಳಲ್ಲೊಂದು. ಬಾಳಿನ ಲೆಕ್ಕಾಚಾರದಲ್ಲಿ ಸೋತವರಾರು, ಗೆದ್ದವರಾರು ಎಂಬುದರ ಸಮೀಕ್ಷೆ ಈ ಕಾದಂಬರಿಯಲ್ಲಿದೆ. ಮನುಷ್ಯ ಅಳಿದ ಮೇಲೆ ಉಳಿಯುವುದೇನು ಎಂಬುದನ್ನು ಶೋಧಿಸಲು ಹೊರಟ ಸುಂದರ ಕಥಾನಕವಿದು. ಸಂಸಾರದಿಂದ, ಸಮಾಜದಿಂದ ತಾವು ಕೊಂಡುದಕ್ಕಿಂತ, ಕೊಟ್ಟುದೇ ಹೆಚ್ಚಾಗಿರಬೇಕು ಎಂಬ ಜೀವನ ಮೌಲ್ಯವನ್ನು ಕಾದಂಬರಿ ಸಾರುತ್ತದೆ.

ಕಥಾನಾಯಕ ಯಶವಂತರಾಯರು ಕಾರಣಾಂತರದಿಂದ ಸಂಸಾರ ತೊರೆದು ಮಯಂಬೈಯಲ್ಲಿ ವಾಸವಿರುವ ವ್ಯಕ್ತಿ. ಕಥಾ ನಿರೂಪಕರು ಮುಂಬೈಗೆ ಹೋದಾಗಲೆಲ್ಲ ಅವರನ್ನು ಭೇಟಿಯಾಗುತ್ತಿದ್ದರು ಮಾತ್ರವಲ್ಲ ಪತ್ರ ವ್ಯವಹಾರವೂ ಇಟ್ಟುಕೊಂಡಿದ್ದರು. ಆದರೂ, ಯಶವಂತರಾಯರ ವ್ಯಕ್ತೊಇಗ ಬದುಕಿನ್ನು ತಿಳಿಯುವ ಕುತೂಹಲ ಹಾಗೂ ಅದನ್ನು ವಿವರಿಸುವ ಉದ್ದೇಶ ಹಾಗೂ ಅಲ್ಲಿ ಸಾಫಲ್ಯ ಕಾಣುವುದೇ ಈ ಕಾದಂಬರಿ ವೈಶಿಷ್ಟ್ಯ. 

ಒಂದು ದಿನ ‘ಬೇಗ ಹೊರಟು ಬನ್ನಿ’ ಎಂಬ ತಂತಿ ಸಂದೇಶಕ್ಕೆ ಸ್ಪಂದಿಸಿ, ಮುಂಬೈ ತಲುಪುವಷ್ಟರಲ್ಲಿ ಯಶವಂತರಾಯರು ಇಹಲೋಕ ತ್ಯಜಿಸಿರುತ್ತಾರೆ. ನಂತರ ಅವರ ಗತಿ ಇತಿಹಾಸದ ಎಲ್ಲ ಎಳೆಗಳು ಒಂದೊಂದಾಗಿ ಅಂತರ್ ಸಂಬಂಧದೊಂದಿಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಯಶವಂತರಾಯರ ಆಸೆಯಂತೆ ಅವರ ಎಲ್ಲ ಸಂಪತ್ತಿನ ವ್ಯವಹಾರ ನಿರ್ವಹಿಸಲು ನಿರೂಪಕರೇ ಮುಂದಾಗುತ್ತಾರೆ. ಪೆಟ್ಟಿಗೆ ತೆರೆದು ಕಾಗದ, ಪುಸ್ತಕ, ಚೆಕ್ ಪುಸ್ತಕ, ಬ್ಯಾಂಕ್ ಪಾಸ್ ಬುಕ್ ಇತ್ಯಾದಿ ಪರಿಶಿಲಿಸುತ್ತಾರೆ. ಸಾಧ್ಯವಿದ್ದ ಎಲ್ಲ ವಿಳಾಸಗಳ ಪಟ್ಟಿ ಮಾಡುತ್ತಾರೆ. ದಿನಚರಿಗಳಿಂದ ಕೆಲವು ಮಹತ್ವದ ಮಾಹಿತಿಯನ್ನೂ ಪರಿಶೀಲಿಸುತ್ತಾರೆ. ಕೌಟುಂಬಿಕ ಕಲಹದಿಂದ ಯಶವಂತರಾಯ ಊರು ತೊರೆದಿರುವುದು ತಿಳಿಯುತ್ತದೆ. ದಿನಚರಿಯಲ್ಲಿ ಬಿಡಿಸಿದ ಕೆಲವು ಚಿತ್ರಗಳಿಂದ ಅವರು ವ್ಯಕ್ತಿಗಳೊಂದಿಗೆ ಹೊಂದಿದ ಸಂಬಂದದ ಸ್ವರೂಪವನ್ನು ತಿಳಿಯುತ್ತಾರೆ. ಮನಿಯಾರ್ಡರ್ ಗಳ ಪರಿಶಿಲನೆ ನಂತರ ಸಾಕು ತಾಯಿಯನ್ನು ನಿರೂಪಕರು ಪತ್ತೆ ಹಚ್ಚುತ್ತಾರೆ.  ಕುಮಟ ಬಳಿಯ ಹೊನ್ನಗದ್ದೆಗೂ ಭೇಟಿ ನೀಡಿ ಯಶವಂತರಾಯರ ಪತ್ನಿ -ಮಕ್ಕಳನ್ನು ಭೇಟಿ ಮಾಡುತ್ತಾರೆ. ಯಶವಂತರಾಯರ ಸಾಲದ ಲೆಕ್ಕವೇ ಕುಟುಂಬದವರಿಗೆ ಪ್ರಮುಖವಾದದ್ದನ್ನು ನಿರೂಪಕರು ಗಮನಿಸುತ್ತಾರೆ. ಯಶವಂತರು ಸರಸಿ ಎಂಬ ಹೆಣ್ಣೊಂದಿಗಿನ ಸಂಬಂಧವೂ ತಿಳಿಯುತ್ತದೆ. ಹೀಗೆ, ಯಶವಂತರಾಯರು ಅಳಿದ ಮೇಲೆ, ಅವರ ಸಮಗ್ರ ಭಾಳಿನ ಲೆಕ್ಕವನ್ನು ಪರಿಶೀಲಿಸುವ ತಂತ್ರದ  ಮೂಲಕ ಕಥೆಯಾಗಿಸಿದ ಲೇಖಕ ಕಾರಂತರ ಶೈಲಿ ಕುತೂಹಲ ಕೆರಳಿಸುತ್ತದೆ. ಸಮಾಜದಿಂದ ಕುಟುಂಬದಂದ ದೂರವಾದರೂ ಯಶವಂತರಾಯರು ‘ಈ ಸಮಾಜಕ್ಕೆ ಕೊಟ್ಟದ್ದೇ ಅಧಿಕ’ ಎಂಬ ತೀರ್ಮಾನ ಕೈಗೊಳ್ಳುತ್ತಾರೆ. ಹೀಗಾಗಿ, ಓದುಗರನ್ನೂ ಚಿಂತನೆಗೀಡುತ್ತಾರೆ. ಇಲ್ಲಿಯೇ ಕಾದಂಬರಿಯ ಹೆಚ್ಚುಗಾರಿಕೆ ಇದೆ.  

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1960ರಲ್ಲಿ (ಪುಟ: 235)  ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books