ಮುಂಜಾವಿನ ಮೌನ

Author : ರವೀಶ್ ಎಸ್

Pages 164

₹ 130.00




Year of Publication: 2019
Published by: ಮೇಘ ಪ್ರಕಾಶನ
Address: ಸೈಟ್‌ ನಂ.419, 4ನೇ ಅಡ್ಡರಸ್ತೆ, ರಾಜಗೋಪಾಲನಗರ, ಬೆಂಗಳೂರು
Phone: 9845450916

Synopsys

ಮುಂಜಾವಿನ ಮೌನ ರವೀಶ್‌ ಅವರ ಕಾದಂಬರಿ. ಮಾನವ ಜೀವಿ ನಿರಂತರವಾಗಿ ಭೌದ್ಧಿಕ ಪರಿಪಕ್ವತೆಯನ್ನು ಸಿದ್ದಿಸಿಕೊಳ್ಳಲು ಹಾತೊರೆದಂತೆ, ಮಾನಸಿಕ ಪರಿಪಕ್ವತೆಯನ್ನೂ ತನ್ನದಾಗಿಸಿಕೊಳ್ಳಲು ಹಪಹಪಿಸಿದ್ದಿದ್ದರೆ ಜೀವ ಜಗತ್ತಿನ ಅತ್ಯಂತ ಕ್ರೂರ ಪ್ರಾಣ  ಮನುಷ್ಯನೆನ್ನುವ ನಿಂದನೆಯಿAದ ಹೊರಬರಬಹುದಿತ್ತು. ತಲೆಮಾರುಗಳುರುಳಿದಂತೆ ಮಾನವ ಜೀವಿ ಬೌದ್ಧಿಕವಾಗಿ ಬಲಿಷ್ಠನಾಗುತ್ತಿದ್ದರೂ, ಮಾನಸಿಕ ಸಂಕುಚಿತತೆಯ ನಿರಂತರತೆಯನ್ನು ಕಾಯ್ದುಕೊಂಡಿದ್ದಾನೆ. ಮಾನಸಿಕ ಸಂಕುಚಿತತೆಯೆಂಬ ಮಹಾಮಾರಿಯನ್ನು ಮೆಟ್ಟಿ ನಿಲ್ಲಬಲ್ಲ ಬೌದ್ಧಿಕ ತಾಕತ್ತಿರುವ ಪ್ರಸ್ತುತ ಕಾಲಘಟ್ಟದ ಮಾನವರ ನಡುವೆಯೂ ಧರ್ಮ, ವರ್ಣ, ಜಾತಿ, ಅಂತಸ್ತುಗಳೆಂಬ ಕೀಳುಮಟ್ಟದ ಕಂದಕಗಳಿರುವುದು ನಿಜಕ್ಕೂ ಮನುಕುಲ ತಲೆತಗ್ಗಿಸಬೇಕಿರುವ ಸಂಗತಿ. ಮನುಷ್ಯ – ಮನುಷ್ಯರ ನಡುವೆ ಮೇಲು ಕೀಳೆಂಬ ಮಾನಸಿಕ ಅಂತರವನ್ನು ಸೃಷ್ಠಿಸುವ ಯಾವುದಾದರೊಂದು ವ್ಯವಸ್ಥೆ ಇರುವುದಾದರೆ ಅದನ್ನು ನಿರ್ಲಕ್ಷಿಸಿ ನಿರ್ಜೀವಗೊಳಿಸಿಬಿಡುವುದೇ ಸೂಕ್ತ. 

ಮನುಷ್ಯನೂ ಒಬ್ಬ ಪ್ರಾಣ ಯಾಗಿರುವುದರಿಂದ ಆತನೊಳಗಿರುವ ಮೃಗೀಯತೆ, ಪ್ರಕೃತಿಯಲ್ಲಿ ಬಲವಿದ್ದವರು ಬದುಕುಳಿಯುತ್ತಾರಾದ್ದರಿಂದ ಆತನಲ್ಲಿರುವ ಸ್ವಾರ್ಥಪರತೆ, ವಿಶ್ಲೇಷಣಾತ್ಮಕ ಸಾಮರ್ಥ್ಯವಿದ್ದಾಗ್ಯೂ ಬೇರೆಯವರನ್ನು ಕಣ್ಮುಚ್ಚಿ ಹಿಂಬಾಲಿಸುವ ಮನುಷ್ಯನೊಳಗಿರುವ ಕುರಿ ಸ್ವಭಾವದ ಗುಣಗಳೇ ಮನುಕುಲದ ಅಶಾಂತಿಯ ಮೂಲ ಬೇರುಗಳು. ಜಗತ್ತಿನ ಎಲ್ಲಾ ರಾಷ್ಟçಗಳ ಜನಸಾಮಾನ್ಯರಲ್ಲಿ ಹೇರಳವಾಗಿರುವ ಈ ಗುಣಗಳೇ ಇಂದಿನ ಧಾರ್ಮಿಕ, ವರ್ಣ, ರಾಷ್ಟಿçÃಯ, ರಾಜಕೀಯ ದಳ್ಳುರಿಗಳೊಳಗಿರುವ ತೈಲ. ಸಾಲುಸಾಲು ರಾಜಕೀಯ, ಧಾರ್ಮಿಕ, ಸಾಮಾಜಿಕ, ವೈe್ಞÁನಿಕ, ಶೈಕ್ಷಣ ಕ ಕ್ರಾಂತಿಗಳ ನಂತರದ ಇಂದಿನ ಕಾಲಘಟ್ಟದಲ್ಲೂ ಬೆರಳೆಣ ಕೆಯಷ್ಟು ಮಂದಿಯ ಸ್ವಾರ್ಥ ಸಾಧನೆಗಾಗಿ ಬಹುಸಂಖ್ಯಾತ ಮಂದಿ ಜನಸಾಮಾನ್ಯರು ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಿರುವುದೇ ಈ ಮೇಲಿನ ದುರ್ಗುಣಗಳಿಂದಾಗಿ.

ಇಡೀ ಮನುಕುಲದ ಉಸಾಬರಿ ನಮಗೇಕೆ ಸ್ವಾಮಿ, ಬನ್ನಿ ಒಂದಿಷ್ಟು ಸಮಯ ನಾವು ಅಲಂಕರಿಸಿಕೊಂಡಿರುವ ಧರ್ಮ, ವರ್ಣ, ರಾಷ್ಟ್ರೀಯತೆ, ಹಣ, ಅಂತಸ್ತು, ಅಧಿಕಾರಗಳೆಂಬ ಆಭರಣಗಳನ್ನು ಕಳಚಿಟ್ಟು ಕೇವಲ ಮನುಷ್ಯರಾಗಿ ಮುಂದಿನ ಪುಟಕ್ಕೆ ಹೋಗೋಣ ಎನ್ನುವ ಲೇಖಕರು ತಮ್ಮ ಕಾದಂಬರಿಯ ಮೂಲಕ ಹೊಸ ಆಲೋಚನೆಯನ್ನು ಓದುಗರ ಮುಂದಿಟ್ಟಿದ್ದಾರೆ. 

About the Author

ರವೀಶ್ ಎಸ್

ಕಾದಂಬರಿಕಾರ, ಉಪನ್ಯಾಸಕ, ಸಂಶೋಧಕ ರವೀಶ್ ಅವರು ರಾಮನಗರ ಜಿಲ್ಲೆಯ, ಕನಕಪುರ ತಾಲ್ಲೂಕಿನ ಯಡಮಾರನಹಳ್ಳಿ ಗ್ರಾಮದವರು.   ಕರ್ಮಯೋಗಿ ಕರಿಯಪ್ಪರವರು ಸ್ಥಾಪಿಸಿರುವ ರೂರಲ್ ಕಾಲೇಜಿನಿಂದ ಬಿ. ಎ. ಪದವಿ ಗಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದೊಲವು ಮೊದಲಾಯಿತು. ತಮ್ಮ ಬರಹಗಳಲ್ಲಿ ಹಳ್ಳಿಗಾಡಿನ ಚಿತ್ರಣವನ್ನು ಕಣ್ಣು ಕಟ್ಟುವಂತೆ ಮೂಡಿಸಿ ಓದುಗರನ್ನು ನಿಬ್ಬೆರಗಾಗಿಸುತ್ತಾರೆ. ರವೀಶ್ ಅವರು ಮೂವತ್ತಕ್ಕೂ ಅಧಿಕ ಸಂಶೋಧನಾ ಲೇಖನಗಳು ಯು.ಜಿ.ಸಿ. ಮಾನ್ಯತೆ ಪಡೆದಿರುವ ...

READ MORE

Conversation

Related Books