ಬೆಂಗಳೂರಿನ ಸತ್ಯಶೋಧನ ಪ್ರಕಟಣ ಮಂದಿರದಿಂದ 1932ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದ ಶಿವರಾಮ ಕಾರಂತರ ಕಾದಂಬರಿ ’ಕನ್ಯಾಬಲಿ’ಯನ್ನು ಸಪ್ನ ಬುಕ್ ಹೌಸ್ ಮರುಮುದ್ರಣ ಮಾಡಿದೆ. ಕಾರಂತರ ಈ ಸಾಮಾಜಿಕ ಕಾದಂಬರಿಯು 1929-30ರಲ್ಲಿ ’ವಸಂತ’ ಪತ್ರಿಕೆಯಲ್ಲಿ ’ಸೂಳೆಯ ಸಂಸಾರ’ ಎಂಬ ಹೆಸರಿನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಬಾಲವಿಧವೆಯೊಬ್ಬಳು ಕುಟುಂಬದಿಂದ ತಿರಸ್ಕೃತಗೊಂಡು ವೇಶ್ಯೆಯಾಗುವ ಕತೆಯ ವಸ್ತುವನ್ನು ಒಳಗೊಂಡ ಈ ಕಾದಂಬರಿಯು ಹಲವು ತಿರುವುಗಳ ಮೂಲಕ ದುಃಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ. ಸಮಾಜದ ಅನಿಷ್ಟ ಪದ್ಧತಿಯನ್ನು ದಾರುಣವಾಗಿ ಚಿತ್ರಿಸುವ ಕಾರಂತರ ಈ ಕಾದಂಬರಿ ಮಾನವೀಯ ಸಂಬಂಧಗಳ ಹುಡುಕಾಟ ನಡೆಸುತ್ತದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MOREಕಾರಂತರ ಕಾದಂಬರಿ ’ಕನ್ಯಾಬಲಿ’-ಬಾಲಸುಬ್ರಹ್ಮಣ್ಯ ಕಂಜರ್ಪಣೆ