ಮೃಗಶಿರ

Author : ಶ್ರೀಧರ ಬಳಗಾರ

Pages 152

₹ 150.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 9448804905

Synopsys

ಶ್ರೀಧರ ಬಳಗಾರ ಅವರ ಕಾದಂಬರಿ ‘ಮೃಗಶಿರ’. ಈ ಕೃತಿಗೆ ಹಿರಿಯ ಲೇಖಕ ಓ.ಎಲ್. ನಾಗಭೂಷಣಸ್ವಾಮಿ ಮುನ್ನುಡಿ ಬರೆದಿದ್ದಾರೆ. ಯಾರು ಕೇವಲ ಕಥೆಯ ಕುತೂಹಲಕ್ಕಾಗಿ ಮಾತ್ರವೇ ಕಾದಂಬರಿಯನ್ನು ಓದುವುದಿಲ್ಲವೋ ಅಂಥ ಓದುಗರಿಗೆ ‘ಮೃಗಶಿರ’ದಲ್ಲಿ ಸಮೃದ್ಧ ಆಹಾರವಿದೆ. ಇಪ್ಪತ್ತನೆಯ ಶತಮಾನದ ಎರಡು-ಮೂರನೆಯ ದಶಕಗಳ ಬದುಕು ಉತ್ತರ ಕನ್ನಡ ಜಿಲ್ಲೆಯ ಕಾಡಿನ ಮಧ್ಯೆದ ಊರುಗಳಲ್ಲಿ ಹೇಗಿತ್ತು ಅನ್ನುವ ಜೀವಂತ ಲೋಕವನ್ನು ಬಳಗಾರರು ಭಾಷೆಯಲ್ಲಿ ಸೃಷ್ಟಿಸಿದ್ದಾರೆ. ಆ ಲೋಕದಲ್ಲಿ ಮಗ್ನವಾಗಿ ಸಂಚರಿಸಬಹುದು. ಯಾರಿಗೆ ಒಂದೇ ಥರದ ಕನ್ನಡ ಓದಿ, ಕೇಳಿ ಬೇಸರವಾಗಿದೆಯೋ ಅವರು ಇಲ್ಲಿ ಇದು ಇಂಥ ಊರಿನ ಇಂಥ ಜನ ಆಡುವ ಕನ್ನಡ ಎಂದು ಓದುತ್ತಲೇ ಮನಸ್ಸಿನಲ್ಲಿ ಕೇಳಿಸಿಕೊಂಡು ನುಡಿ ಕುತೂಹಲ ತಣಿಸಿಕೊಳ್ಳಬಹುದು ಎಂಬುದು ನಾಗಭೂಷಣಸ್ವಾಮಿ ಅವರ ಅಭಿಪ್ರಾಯ.

ಈ ಕಾದಂಬರಿ ವ್ಯಾವಹಾರಿಕ ದೃಷ್ಟಿಯಿಂದ ಸ್ವಾತಂತ್ರ್ಯ ಪೂರ್ವದ ಕಾಲದ್ದು; ಕಾದಂಬರಿಯ ದೇಶ ಉತ್ತರ ಕನ್ನಡ ಜಿಲ್ಲೆ. ಕಾದಂಬರಿಯ ತಿರುಳು ಮಾತ್ರ ಕಾಲ, ದೇಶಗಳನ್ನು ಮೀರಿದ, ಕಾಮ ದ್ವೇಷ, ಮತ್ತು ಸತ್ಯಾನ್ವೇಷಣೆ. ರಚನೆಯ ದೃಷ್ಟಿಯಿಂದ ಇದು ಬೇರೆ ಬೇರೆ ನಿರೂಪಕರು ಹೊತ್ತು ಮುಂದೆ ಮುಂದೆ ಸಾಗಿಸುತ್ತ ಕೊನೆಗೆ ಓದುಗರ ಮನದಂಗಳದಲ್ಲಿ ತಂದಿಳಿಸುವ ‘ಕಥೆಗಳ ಪಲ್ಲಕ್ಕಿ.’ ಪರಿಣಾಮದ ದೃಷ್ಟಿಯಿಂದ ಬಹಳಷ್ಟು ಎಡೆಗಳಲ್ಲಿ ಭಾವಗೀತೆಯ ತೀವ್ರತೆಯೊಡನೆ ಓದುಗರನ್ನು ಪರವಶಗೊಳಿಸುವ, ‘ಎಂಬುದೆಲ್ಲದರ ಅರ್ಥ’ ಎಂದು ಕೆಣಕುವ ರಚನೆಯಾಗಿದೆ.

About the Author

ಶ್ರೀಧರ ಬಳಗಾರ

ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ  ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ  'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...

READ MORE

Reviews

ಭೂತ ಕನ್ನಡಿಯಲ್ಲಿ ವರ್ತಮಾನದ ಬಿಂಬಗಳು-ಪ್ರಜಾವಾಣಿ-ಪದ್ಮನಾಬ ಭಟ್‌

ಮೃಗಶಿರವೆಂಬ ಗ್ರಾಮ ಭಾರತದ ಕಥನ-ವಿಜಯವಾಣಿ

ಶ್ರೀಧರ ಬಳಗಾರ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಶ್ರೀಧರ ಬಳಗಾರರು ರಚಿಸಿರುವ ಹೊಸ ಕಾದಂಬರಿ 'ಮೃಗರ' ಗಮನ ಸಳಯುವ ಕೃತಿ. ಮೂರು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಭಾಜನರಾಗಿರುವ ಬಳಗಾರರು, ಉತ್ತರಕನ್ನಡ ಜಿಲ್ಲೆ ಯ ಹಿನ್ನೆಲೆಯಲ್ಲಿ ಕಥನವನ್ನು ಕಟ್ಟುವುದರಲ್ಲಿ ಸಿದ್ಧಹಸ್ತರು. 'ಮೃಗಶಿರ'ದಲ್ಲಿ ಸ್ವಾತಂತ್ರ್ಯ ಹೋರಾಟದ ಹೊಳಹುಗಳೂ ಕಾಣಿಸಿರುವುದು ವಿಶೇಷ. 'ನಾಡಿಗರ ಗಲ್ಲಿಯ ಯಾರದೋ ಮನೆಯಲ್ಲಿ ಜಾತ್ರೆಯಲ್ಲಿ ಕೋಣನನ್ನು ಬಲಿಕೊಡುವ ವಿಚಾರ ಗಾಂಧೀಜಿಯವರ ಕಿವಿಗೆ ಬಿತ್ತಂತೆ. ಭಾಷೆಣಕ್ಕಿಂತ ಮುಂಚೆ ಅವರು ಮಾರಿಗುಡಿಗೆ ದಾಪುಗಾಲಲ್ಲಿ ಧಾವಿಸಿ ಮೊತ್ತೇಸರರನ್ನು ಭೇಟಿಯಾಗಿ ಬಲಿ ನಿಲ್ಲಿಸಿ ಜಾತ್ರೆಯನ್ನು ಅಹಿಂಸಾತ್ತವಾಗಿ ನಡೆಸಿಕೊಂಡು ಹೋಗಲು ವಿನಂತಿಸಿದರಂತೆ.' (ಪುಟ 27) ಶ್ರೀಧರ ಬಳಗಾರರ ಈ ಕಾದಂಬರಿಯು ವಿಸ್ಕತ ವಿಮಶೆಗೆ ಒಡ್ಡಿಕೊಳ್ಳುವ ಅಗತ್ಯವಿದೆ. ಹಾಗೆ ನೋಡಿದರೆ ಬಳಗಾರರ ಸಾಹಿತ್ಯಕೃಷಿಯನ್ನು ಇನ್ನಷ್ಟು ವ್ಯಾಪಕ ಚರ್ಚೆಗೆ ಒಳಪಡಿಸುವ ಅಗತ್ಯವೂ ಇದೆ. ಮುನ್ನುಡಿಯಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ ಯವರು ಗುರುತಿಸಿದಂತೆ, 'ಶ್ರೀಧರ ಬಳಗಾರರಂಥ ಲೇಖಕರ ಕೃತಿಗಳ ಬಗ್ಗೆ ನಡೆಯ ಬಹುದಾಗಿದ್ದಷ್ಟೂಚರ್ಚೆ ನಡೆದಿಲ್ಲ ಅನ್ನುವುದು ಖೇದ ಹುಟ್ಟಿಸುತ್ತದೆ'.

ಕೃಪೆ: ವಿಶ್ವವಾಣಿ (2020 ಜನವರಿ 19)

ಶ್ರೀಧರ ಬಳಗಾರ ಕಾದಂಬರಿಯ ಕುರಿತು ಶ್ರೀದೇವಿ ಕೆರೆಮನೆ ಬರಹ- ಕೆಂಡಸಂಪಿಗೆ

ಮೃಗಶಿರ-ವಿಜಯವಾಣಿ-ರಾಜಶೇಖರ ಜೋಗಿನ್ಮನೆ

Related Books