ಖೋಟಾ ನೋಟು

Author : ತ. ರಾ. ಸು. (ತ. ರಾ. ಸುಬ್ಬರಾವ್)

Pages 152

₹ 90.00




Year of Publication: 2018
Published by: ಸಾಹಿತ್ಯ ನಂದನ
Address: ನಂ, 9, 4ನೇ ‘ಇ’ ವಿಭಾಗ, 10 ‘ಎ’ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು- 560010
Phone: 080-23354619

Synopsys

‘ಖೋಟಾ ನೋಟು’ ತ.ರಾ.ಸು ಅವರ ಸಾಮಾಜಿಕ ಕಾದಂಬರಿ. ಮದ್ಯಪಾನ ನಿರೋಧದ ಕಾಲದಲ್ಲಿ ಸರ್ವವ್ಯಾಪಿಯಾಗಿ, ಸಾಮಾನ್ಯ ಗೃಹ ಕೈಗಾರಿಕೆಯಂತೆ ಕಳ್ಳಭಟ್ಟಿ ಬೆಳೆದ ಹಾಗೆಯೇ ಇಂದು ನಮ್ಮ ದೇಶದಲ್ಲಿ ಖೋಟಾ ನೋಟಿನ ತಯಾರಿಕೆಯೂ ಬೆಳೆದಿದೆ. ಪ್ರತಿ ದಿನವೂ ದಿನಪತ್ರಿಕೆ ಯಲ್ಲಿ ದೇಶದ ಯಾವುದಾದರೊಂದು ಭಾಗದಲ್ಲಿ ನಡೆದ ಖೋಟಾ ನೋಟಿನ ಪ್ರಕರಣವನ್ನು ಓದಬಹುದು. ದೇಶದಲ್ಲಿ ಯಾರ ಬಾಯಲ್ಲಿ ಕೇಳಿದರೂ ಇದರದೇ ಮಾತು. ಹಾಗೆ ನಾನು ಓದಿದ ನೂರಾರು ಸುದ್ದಿ, ಕೇಳಿದ ನೂರಾರು ಕಥೆಗಳೇ ಈ ಕಾದಂಬರಿ ರಚನೆಗೆ ಆಧಾರ ಎನ್ನುತ್ತಾರೆ ತ.ರಾ.ಸು. ಈ ವೃತ್ತಿಯಲ್ಲಿ ಹೇಗೆ ಎಲ್ಲ ವರ್ಗದ ಜನರೂ ಪಾಲುಗಾರರಾಗಿದ್ದಾರೆ ಎಂಬುದನ್ನು ಚಿತ್ರಿಸಲು ತ.ರಾ.ಸು. ಯತ್ನಿಸಿದ್ದಾರೆ.

About the Author

ತ. ರಾ. ಸು. (ತ. ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books