ತಿರುಗೋಡಿನ ರೈತ ಮಕ್ಕಳು

Author : ನಾ. ಡಿಸೋಜ

₹ 13.00
Published by: ಕನ್ನಡ ಸಂಸ್ಕೃತಿ ಇಲಾಖೆ

Synopsys

ಸಾಹಿತಿ ನಾ.ಡಿಸೋಜ ಅವರ ಕಾದಂಬರಿ ‘ತಿರುಗೋಡಿನ ರೈತ ಮಕ್ಕಳು’.ಇದು ಮಣ್ಣಿನ ಮಕ್ಕಳಾದ ಗೇಣಿದಾರರ ಬದುಕು-ಬವಣೆಯ ಕಥನ, ಜಮೀನ್ದಾರರ ದರ್ಪದ ಕರಾಳ ಮುಖ. ತಿರುಗೋಡು ಎಂಬ ಹಳ್ಳಿಯಲ್ಲಿ ಜಮೀನ್ದಾರರ ಭೂಮಿಯನ್ನು ಗೇಣಿಯಾಗಿ ಉಳುಮೆ ಮಾಡಿ, ತಕ್ಕ ಮಟ್ಟಿನ ನೆಮ್ಮದಿ ಬದುಕು ಕಂಡುಕೊಂಡವರು, ಅಂದಿನ ರಾಜಕೀಯ ವ್ಯವಸ್ಥೆ ಶ್ರೇಣಿಯ ಹಂತದಲ್ಲಿರುವರ ಹಣದ ಹಪಾಪಿತನಕ್ಕೆ ಬಲಿಯಾದ ಜನರ ಜೀವನದ ದುರಂತತೆಯನ್ನು ಈ ಸಣ್ಣ ಕಾದಂಬರಿ ತೆರೆದಿಡುತ್ತದೆ.

About the Author

ನಾ. ಡಿಸೋಜ

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ...

READ MORE

Related Books