ಕಲ್ಲರಳಿ ಹೂವಾಗಿ

Author : ಬಿ.ಎಲ್.ವೇಣು

Pages 228

₹ 210.00




Year of Publication: 2021
Published by: ಕೀರ್ತಿ ಪಬ್ಲಿಕೇಷನ್ಸ್
Address: # 230, ಬಿಲ್ಡಿಂಗ್ 167, ಕೆ.ಎಚ್.ಬಿ. ಅಪಾರ್ಟ್ ಮೆಂಟ್, ಕೆಂಗೇರಿ ಉಪನಗರ, ಬೆಂಗಳೂರು-560060

Synopsys

ಖ್ಯಾತ ಕಾದಂಬರಿಕಾರ ಡಾ. ಬಿ.ಎಲ್. ವೇಣು ಅವರ ಐತಿಹಾಸಿಕ ಕಾದಂಬರಿ-ಕಲ್ಲರಳಿ ಹೂವಾಗಿ. ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ನಂತರ ನಂತರ, ಅದು ಚಲಚಿತ್ರವಾಗಿಯೂ ಗಮನ ಸೆಳೆದಿತ್ತು. ಚಿತ್ರದುರ್ಗದ ಮದಕರಿ ನಾಯಕನ ಓಲೆಗಾರನಿಗೆ ಹಾಡುವುದು ಇಷ್ಟ. ಒಂದು ದಿನ ಹುಣ್ಣಿಮೆಯ ರಾತ್ರಿ ದುರ್ಗದ ಹೊರವಲಯದಲ್ಲಿ ಗಾಯಾಳಾಗಿ ಪ್ರಜ್ನೆ ಕಳೆದುಕೊಂಡ ಹೈದರಾಲಿಯ ಸೇನಾಪತಿಯ ಮಗಳು ನೂರ್ ಜಹಾನ್ ಅವಳನ್ನು ದುರ್ಗಕ್ಕೆ ಕರೆ ತರುತ್ತಾನೆ.  ತಂದೆ ವೈದ್ಯ ಬಸಯ್ಯ ಶತ್ರುವಿನ ಹುಡುಗಿಯನ್ನು ಉಪಚರಿಸುತ್ತಾನೆ. ಅವಳನ್ನುಅನಾತೆ ಎಂದೂ ಇತರರಿಗೆ ಪರಿಚಯಿಸಿ, ಅವಳಿಗೆ ಜಯದೇವ ರತ್ನ ಎಂದು ಮರುನಾಮಕರಣವಾಗಿ ನೂರ್ ಅಲಿಯಾಸ್ ರತ್ನ, ತಂದೆ ತಾಯಿಯ ಮರಣದ ಅಘಾತದಿಂದ ಮಾತು ಕಳೆದುಕೊಂಡಿರುತ್ತಾಳೆ. ಆದರೆ, ಜಯದೇವನೊಂದಿಗೆ ನಡೆಸುವ ಮಾತುಕತೆಯು ಹಾಗೂ ಪ್ರೇಮವು ಅವಳಿಗೆ ಮಾತು ಬರುವಂತಾಗುತ್ತದೆ. ಇಂತಹ ವಸ್ತುವನ್ನು ಈ ಕಾದಂಬರಿ ಒಳಗೊಂಡಿದೆ. 

About the Author

ಬಿ.ಎಲ್.ವೇಣು
(05 May 1945)

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...

READ MORE

Related Books