ಹೆಣ್ಣುಜೀವ

Author : ಕೃಷ್ಣಮೂರ್ತಿ ಪುರಾಣಿಕ

Pages 176

₹ 90.00




Year of Publication: 2013
Published by: ಇಂದಿರಾ ಪ್ರಕಾಶನ
Address:

Synopsys

ಕಳೆದ ಶತಮಾನದ ಕನ್ನಡ ಬರಹಗಾರರಲ್ಲಿ ಕೆಲವು ಬರಹಗಾರರ ಹೆಸರು ಕನ್ನಡ ಸಾಹಿತ್ಯ ಇತಿಹಾಸವನ್ನು ಅಚ್ಚಳಿಯದೆ ಬೆಳಗುತ್ತಿವೆ. ಅಂಥ ಬರಹಗಾರರಲ್ಲಿ ಒಂದು ಹೆಸರು ಕೃಷ್ಣಮೂರ್ತಿ ಪುರಾಣಿಕರದು. ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೈಯಾಡಿಸಿ ತಮ್ಮದೇಯಾದ ‘ಛಾಪು’ ಮೂಡಿಸಿದ್ದಾರೆ.ಹೆಣ್ಣು ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದ ಸಾಹಿತಿಗಳಲ್ಲಿ ಇವರು ಅಗ್ರಗಣ್ಯರು. ಅವರ ಪ್ರಸ್ತುತ ಸಾಮಾಜಿಕ ಕಾದಂಬರಿ ಹೆಣ್ಣು ಜೀವ. ಸಮಾಜದಲ್ಲಿ ಹೆಣ್ಣು ಅನುಭವಿಸುವ ಸಮಸ್ಯೆಗಳು, ಸವಾಲುಗಳನ್ನು ಛಲದಿಂದ ಎದುರಿಸುವ ಪರಿಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. .1960ರಲ್ಲಿ ಈ ಕೃತಿ ಮೊದಲ ಮುದ್ರಣ ಕಂಡಿದೆ.

About the Author

ಕೃಷ್ಣಮೂರ್ತಿ ಪುರಾಣಿಕ
(05 September 1911 - 09 November 1985)

ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು  ಬೆಳ್ಳೆತೆರೆ ಕಂಡಿವೆ.  'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...

READ MORE

Related Books