ಶಂಖವಾದ್ಯ

Author : ನಾ. ಕಸ್ತೂರಿ

Pages 162

₹ 1.00
Year of Publication: 1948
Published by: ರಾ.ವೆಂ. ಶ್ರೀನಿವಾಸ
Address: ಉಷಾ ಸಾಹಿತ್ಯ ಮಾಲೆ, ಮೈಸೂರು

Synopsys

ಖ್ಯಾತ ಸಾಹಿತಿ ನಾ. ಕಸ್ತೂರಿ ಅವರು ಬರೆದ ಕಾದಂಬರಿ-ಶಂಖವಾದ್ಯ. ಎರಡು ಪತ್ರಿಕೆಗಳು ಮಾಡಿಕೊಂಡ ನಿಗೂಢ ಒಪ್ಪಂದದಿಂದ ಸುಳ್ಳು ಹಾಗೂ ವೈಷಮ್ಯದ-ಕಲ್ಪನಾಭರಿತ ಸುದ್ದಿಯನ್ನು ಪ್ರಕಟಿಸಿ ತಮ್ಮ ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳುವ ಹುನ್ನಾರವನ್ನು ಕಾದಂಬರಿಯಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಜನರನ್ನು ಈ ಮಾಧ್ಯಮಗಳು ಹೇಗೆ ಮೂರ್ಖರನ್ನಾಗಿಸುತ್ತವೆ ಎಂಬುದು ಚಿತ್ರಿತವಾಗಿದೆ.

About the Author

ನಾ. ಕಸ್ತೂರಿ
(25 December 1897 - 14 August 1987)

ಕೇರಳದ ತ್ರಿಪುನಿತ್ತೂರ್ ಗ್ರಾಮದಲ್ಲಿ ಜನಿಸಿದ ನಾ. ಕಸ್ತೂರಿ ಅವರು ಕೇರಳದ ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ತಂದೆ ನಾರಾಯಣ. ಇತಿಹಾಸದಲ್ಲಿ ಸ್ನಾತಕೋತ್ತರ (ಎಂ.ಎ.) ಪಡೆದ ನಂತರ ಬಿ.ಎಲ್. ಪದವಿ ಪಡೆದರು. ವಕೀಲಿ ವೃತ್ತಿಗೆ ಸೇರುವ ಬದಲು ಶಿಕ್ಷಕ ವೃತ್ತಿಯತ್ತ ಹೊರಳಿದರು. ಮೈಸೂರಿಗೆ ಬಂದ ಅವರು ಅಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ನಾಟಕ, ಪ್ರಹಸನ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಗಗ್ಗಯ್ಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ, ರಾಮಕೃಷ್ಣಯ್ಯನ ದರ್ಬಾರು, ಹೋಳು-ಬಾಳು, ಬ್ಯಾಂಕಿನ ದಿವಾಳಿ ಮುಂತಾದುವು ಅವರ ನಾಟಕಗಳು. ಗಾಳಿಗೋಪುರ, ಶಂಖವಾದ್ಯ, ರಂಗನಾಯಕಿ, ಅಲ್ಲೋಲ, ಕಲ್ಲೋಲ, ಉಪಾಯ ವೇದಾಂತ ಮುಂತಾದ ಹಾಸ್ಯ ಸಂಕಲನಗಳನ್ನು ರಚಿಸಿರುವುದಲ್ಲಿ ಹಾಸ್ಯ ...

READ MORE

Related Books