ಬಾರೇ ಭಾಗ್ಯದ ಸಿರಿಯೇ

Author : ಹೆಚ್.ಜಿ. ರಾಧಾದೇವಿ

Pages 140

₹ 32.00




Year of Publication: 1996
Published by: ಕೀರ್ತಿ ಪ್ರಕಾಶನ
Address: 2, ಎಸ್.ಡಿ.ಎಂ. ಲೇನ್, ಮನವಾರ್ತೆಪೇಟೆ, ಬೆಂಗಳೂರು- 53

Synopsys

‘ಬಾರೇ ಭಾಗ್ಯದ ಸಿರಿಯೇ’ ಹೆಚ್.ಜಿ. ರಾಧಾದೇವಿ ಅವರ ಸಾಮಾಜಿಕ ಕಾದಂಬರಿ. ರಹಸ್ಯಗಳು ವೈಜ್ಞಾನಿಕ ತತ್ವಗಳು ಒಂದಕ್ಕೊಂದು ಹೇಗೆ ಪೂರಕವಾಗಿವೆ ಎಂಬುದನ್ನು ಪ್ರಸ್ತಾಪಿಸಲಾಗಿದೆ. ಪ್ರಸಿದ್ಧ ವಿಜ್ಞಾನಿ ಒಬ್ಬರು ವೈದಿಕ ಬ್ರಾಹ್ಮಣನೋರ್ವನ ಬಳಿ ಬಂದು ಚರ್ಚಿಸುವ ಕತಾ ಭಾಗ ಇಲ್ಲಿದೆ. ದೈವ ಭಕ್ತ, ಹಿರಿಯರ ಆರಾಧನೆ, ಧಾರ್ಮಿಕ ಶ್ರದ್ಧೆಗಳಿಂದ ಮನುಷ್ಯನ ಬದುಕಿನ ಉನ್ನತಿ ಸಾಧ್ಯ ಎಂಬುದು ಈ ಕಾದಂಬರಿ ಸೂಚಿಸುತ್ತದೆ.

About the Author

ಹೆಚ್.ಜಿ. ರಾಧಾದೇವಿ - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books