ಮಂಜಿನ ಕಾನು

Author : ನಾ. ಡಿಸೋಜ

Pages 216

₹ 110.00




Year of Publication: 1967
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060\n

Synopsys

ಹಸಲರ ಜನಾಂಗದ ಮೇಲೆ ಡಿಸೋಜರು ಮಂಜಿನಕಾನು ಮತ್ತು ಶಿವನ ಡಂಗುರ ಎಂಬ ಎರಡು ಕಾದಂಬರಿಗಳು ಹಾಗೂ ಹುಟ್ಟಾಳಿಗೊಂದು ಹೆಣ್ಣು, ಅವರು ತುಳಿದ ಹೊಲ, ಓಡಿಹೋದವನನ್ನು ಹುಡುಕ ಹೊರಟವರು, ಹಸಲರ ಬೆನವ ಹೊಲ ಮಾಡಿದ ಎಂಬ ನಾಲ್ಕು ಕಥೆಗಳನ್ನು ಬರೆದಿದ್ದಾರೆ. ನಾ. ಡಿಸೋಜ ಅವರ ಬಹುತೇಕ ಕೃತಿಗಳು ಇಂತಹ ವಾಸ್ತವ ನೆಲೆಗಟ್ಟಿನಲ್ಲೆ ರಚಿತವಾದಂತವು. ಲಿಂಗನಮಕ್ಕಿ ಆಣೆಕಟ್ಟು ಸಂತ್ರಸ್ತರ ಬವಣೆಗಳನ್ನು, ಕಾಗೋಡು ಚಳುವಳಿ ಹೋರಾಟವನ್ನು, ಮೇಲ್ವರ್ಗದವರಿಂದ ಕೆಳವರ್ಗದವರ ಶೋಷಣೆಗಳಿಗೆಲ್ಲಾ ಡಿಸೋಜರು ತಮ್ಮ ಲೇಖನಿಯ ಮೂಲಕ ದನಿಯಾಗಿದ್ದಾರೆ. ಒಬ್ಬ ಲೇಖಕ ತನ್ನ ಕತೆ ಕಾದಂಬರಿಗಳ ಮೂಲಕ ತಾನಿರುವ ಸ್ಥಳದ ಪ್ರಾದೇಶಿಕ ಪರಿಸರ, ಭಾಷೆ, ಸಂಸ್ಕೃತಿ, ಜನಾಂಗ, ಇತಿಹಾಸವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ಆ ಭಾಗದ ಜನರ ಸುದೈವವೇ ಸರಿ.

About the Author

ನಾ. ಡಿಸೋಜ
(06 June 1937 - 05 January 2025)

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಅವರು 2025 ಜ. 05 ಭಾನುವಾರದಂದು ನಿಧನರಾದರು.  ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ...

READ MORE

Related Books