ಮಸುಕು ಬೆಟ್ಟದ ದಾರಿ

Author : ಎಂ.ಆರ್‌. ದತ್ತಾತ್ರಿ

Pages 340

₹ 300.00




Year of Publication: 2014
Published by: ಮನೋಹರ ಗ್ರಂಥ ಮಾಲಾ
Address: ಸುಭಾಷ್ ರಸ್ತೆ, ಧಾರವಾಡ

Synopsys

ಲೇಖಕ ಎಂ.ಆರ್. ದತ್ತಾತ್ರಿ ಅವರ ಕೃತಿ-ಮಸುಕು ಬೆಟ್ಟದ ದಾರಿ. ಮಾನವ ಭಾವಜೀವಿ. ಆತನಿಗೆ ನೆನಪುಗಳು ಬೇಕು. ಸಂಬಂಧಗಳು ಬೇಕು. ಮನುಷ್ಯನ ಸಾಧನೆಗೆ ಕುಟುಂಬ ಸೇರಿದಂತೆ ಸ್ನೇಹಿತರ ಸಹಕಾರವೂ ಮುಖ್ಯ. ಈ ಅಂಶವನ್ನು ಕಾದಂಬರಿಯು ಪ್ರತಿಪಾದಿಸುತ್ತದೆ. ಲೇಖಕರ ಊರಾದ ಚಿಕ್ಕಮಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳು ಈ ಕಥೆಗೆ ಪ್ರಾದೇಶಿಕ ಅಸ್ತಿತ್ವವನ್ನು ಒದಗಿಸಿವೆ. ಕಥೆಯು ಪ್ರಾರಂಭಗೊಳ್ಳುವುದು ಎಪ್ಪತ್ತರ ದಶಕದಲ್ಲಿ ಮತ್ತು ಕೊನೆಗೊಳ್ಳುವುದು ಹೊಸ ಸಹಸ್ರಮಾನದ ಆರಂಭದಲ್ಲಿ. ಚಿಕ್ಕಮಗಳೂರಿನ ಬದುಕಿನಲ್ಲಿ ಯಾವುದೋ ಒಂದು ಸ್ವರೂಪದಲ್ಲಿ ಮುಳ್ಳಯ್ಯನ ಗಿರಿಯು ಪ್ರತಿಜೀವಿಯನ್ನು ಮುಟ್ಟುವುದರಿಂದ ನನ್ನ ಈ ಕಾದಂಬರಿಯ ಪೂರ್ಣ ಬರವಣಿಗೆಯಲ್ಲಿ ಆ ಬೆಟ್ಟವೂ ಒಂದು ಪಾತ್ರದಷ್ಟೇ ತೀವ್ರ ಸ್ವರೂಪದಲ್ಲಿ ಕಾಡಿತು ಎಂದು ಲೇಖಕರು ಹೇಳುತ್ತಾರೆ.

About the Author

ಎಂ.ಆರ್‌. ದತ್ತಾತ್ರಿ

ಕಾದಂಬರಿಕಾರ, ಕವಿ, ಅಂಕಣಕಾರ, ಮತ್ತು ಅನುವಾದಕರಾಗಿ ಎಂ ಆರ್ ದತ್ತಾತ್ರಿ ಯವರು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೂಲದ ಊರು ಚಿಕ್ಕಮಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯ ರಿಂಗ್ ಪದವಿ ಪಡೆದು ಕೆಜಿಎಫ್, ಪುಣೆ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲಿಸ್ ನಗರಗಳಲ್ಲಿ ವೃತ್ತಿ ಜೀವನ ನಡೆಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಸಾಧನೆಗಳ ಕೀರ್ತಿ ದತ್ತಾತ್ರಿಯವರದ್ದಾಗಿದೆ. ಇಆರ್‌ಪಿ ಕ್ಲೌಡ್ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಕೆಲಸ ಮಾಡಿದ ಅನುಭವವು ಅವರದ್ದು. ಅಮೆರಿಕ ಮತ್ತು ಭಾರತದ ಅನೇಕ ...

READ MORE

Related Books