ಅಬ್ಬೆ

Author : ಶಶಿಧರ ಹಾಲಾಡಿ

Pages 264

₹ 250.00




Year of Publication: 2022
Published by: ಅಂಕಿತ ಪ್ರಕಾಶನ
Address: ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 0802661 7100

Synopsys

'ಅಬ್ಬೆ' ಶಶಿಧರ ಹಾಲಾಡಿ ಅವರ ಕಾದಂಬರಿಯಾಗಿದೆ. ಕಟ್ಟುಕಥೆಯ ವ್ಯಾಪ್ತಿಯಿಂದ ಒಟ್ಟು ಕಥೆಯನ್ನು ಹೊರಗಿಡುವ ಎರಡು ಆಯಾಮಗಳನ್ನು ಇಲ್ಲಿನ ಕಥಾಶಿಲ್ಪದಿಂದ ಪ್ರತ್ಯೇಕಿಸಿ ಗುರುತಿಸಿದಾಗ ಶಶಿಧರ ಹಾಲಾಡಿಯವರ ಕಥನಕಲೆಯ ವೈವಿಧ್ಯ ಮತ್ತು ವೈಶಿಷ್ಟ್ಯ ಮನದಟ್ಟಾಗುತ್ತದೆ. ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಕಲ್ಲೂರಾಯರೊಂದಿಗೋ, ದಪ್ಪ(ನಂತೆ ಕಾಣಿಸುವ) ಭಾಸ್ಕರನೊಂದಿಗೂ ಬೆಟ್ಟ ಗುಡ್ಡಗಳಲ್ಲಿ ಅಲೆಯುತ್ತಾ ನಿರೂಪಕ ಕಾಣುವ ಪುಷ್ಪಜಾಜಿ ಮೊದಲಾದ ಅಪರೂಪದ ಸಸ್ಯವೈವಿಧ್ಯಗಳೇ ಇರಬಹುದು, ಅಷ್ಟೇ ಅಪರೂಪದ ಅಜ್ಜಿ ಜೇಡ, ಸ್ವಾಮಿಂಗೋ ಹಕ್ಕಿಗಳು, ಕಲ್ಕೆರೆಯ ಕೆರೆ ಏರಿಯ ಮರದಲ್ಲಿ ಗೂಡು ಕಟ್ಟಿಕೊಂಡಿರುವ ಕೊಕ್ಕರೆಗಳೇ ಮೊದಲಾದ ಜೀವ ವೈವಿಧ್ಯವೇ ಇರಬಹುದು, ಅವುಗಳನ್ನು ಸೂಕ್ಷ್ಮವಾಗಿ ಅವಲೋಕಿಸುವಲ್ಲಿ ಮತ್ತು ನಿರೂಪಿಸುವಲ್ಲಿ ಬಿಜಿಎಲ್ ಸ್ವಾಮಿ ಮತ್ತು  ತೇಜಸ್ವಿಯವರು ಹಾಕಿಕೊಟ್ಟ ಮಾದರಿಗಳನ್ನು ನೆನಪಿಸುವ ಸೊಗಸಿದೆ, ಕೆಂಚಪ್ಪನ ಗುಡಿಸಲಿನಲ್ಲಿ ಅಡಗಿಸಿಟ್ಟ ಗೋಣಿ ಚೀಲಗಳು, ಬೆಟ್ಟದ ಮೂಲೆಯ ಪುರಾತನ ಕಟ್ಟಡದಲ್ಲಿ ಕಂಡ ಸಂನ್ಯಾಸಿಗಳು, ಸಾಧಕರು, ನಿರ್ಜನ ಹಾದಿಯಲ್ಲಿ ಎದುರಾಗುವ ಸ್ವಾಮಿ ಇವೆಲ್ಲ, ತೇಜಸ್ವಿಯವರು ಸೃಷ್ಟಿಸಿ ಕೈಬಿಟ್ಟ ನಿಗೂಢ ಜಗತ್ತೊಂದರ ಮುಂದುವರಿಕೆಯಂತೆ ಕಾಣಿಸುತ್ತದೆ ಎಂದು ಪುಸ್ತಕದ ಬೆನ್ನುಡಿಯಲ್ಲಿ ಬೆಳಗೋಡು ರಮೇಶ ಭಟ್‌ ತಿಳಿಸಿದ್ದಾರೆ.

About the Author

ಶಶಿಧರ ಹಾಲಾಡಿ

ಶಶಿಧರ ಹಾಲಾಡಿ ಅವರು ಲೇಖಕರು. ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಮೈಸೂರು ವಿ.ವಿ.ಯಿಂದ ಎಂ.ಎ. (ಕನ್ನಡ)  ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್‍ ಪಡೆದಿದ್ದು, ಸಣ್ಣ ಕಥೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣ ಬರಹ ಮತ್ತು ಲೇಖನಗಳನ್ನು ಬರೆದಿದ್ದಾರೆ. ಶಿವಮೊಗ್ಗದ ನಾವಿಕ ದಿನಪತ್ರಿಕೆಯಲ್ಲಿ 12 ವರ್ಷ ಕಾಲ ಅಂಕಣಕಾರರು.  ಪರಿಸರ , ಪಕ್ಷಿವೀಕ್ಷಣೆ, ಚಾರಣ (ಹಿಮಾಲಯದಲ್ಲಿ ಚಾರಣ ನಡೆಸಿದ ಅನುಭವ ಛಾಯಾಗ್ರಹಣ (ರಾಜ್ಯ ಮಟ್ಟದ ಲ್ಯಾಂಡ್‍ಸ್ಕೇಪ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ), ಅಂಕಣ ಬರಹ, ಸಣ್ಣ ಕಥೆ ರಚನೆ ಇವರ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ನ್ಯಾಯಾಶಾಸ್ತ್ರಜ್ಞ ಸರ್ ಬೆನಗಲ್ ನರಸಿಂಗ ರಾವ್ ಕುರಿತು ಜೀವನ ...

READ MORE

Related Books